ಬಂಡೆ ದೇಹಕ್ಕೆ ತಗುಲಿದ್ದು ಪೊಲೀಸರ ಗುಂಡು

ಬೆಂಗಳೂರು: ಹಲವು ಅನುಮಾನಗಳಿಗೆ ಆಸ್ಪದವಾಗಿದ್ದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಶೂಟೌಟ್ ಪ್ರಕರಣದ ಸಿಐಡಿ ವರದಿ ಬಹಿರಂಗವಾಗಿದ್ದು, ಬಂಡೆ ಅವರ  ತಲೆಗೆ ಹೊಕ್ಕಿದ್ದ ಗುಂಡು ಪೊಲೀಸರದ್ದೆ ಎಂದು ವರದಿ ಹೇಳಿದೆ.

ಬಂಡೆ ಪ್ರಕರಣದ ಸಿಐಡಿ ತನಿಖಾ ವರದಿ ಪ್ರಕಾರ, ಪೊಲೀಸರ  ಗುಂಡು ಬಂಡೆ ಅವರ ದೇಹಕ್ಕೆ ತಗುಲಿ ಸಾವನ್ನಪ್ಪಿದ್ದಾರೆ ಎಂಬ ಕೂತೂಹಲಕಾರಿ ಮಾಹಿತಿ ಹೊರ ಬಿದ್ದಿದೆ.

ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ಅವರ ನೇತೃತ್ವದಲ್ಲಿ ಬಂಡೆ ಸಾವಿನ ಪ್ರಕರಣದ ತನಿಖೆ ನಡೆಯುತ್ತಿತ್ತು.

ಗುಲ್ಬರ್ಗಾದಲ್ಲಿ ಶಾರ್ಪ್‌ ಶೂಟರ್‌ ಮುನ್ನಾ ರೋಜಾ ಹಾಗೂ ಪೊಲೀಸರ ನಡುವೆ ಗುಂಡಿನ ಚಕಮಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಹೆಚ್ಚಿನ  ಹೈದ್ರಾಬಾದ್‌ನ ಯಶೋಧ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದರು.

ಬಂಡೆ ಸಾವಿನ ಬಗ್ಗೆ ತನಿಖೆ ನಡೆಸಬೇಕಾಗಿ ಕೋರಿ ಬಂಡೆ ಪತ್ನಿ ಮಲ್ಲಮ್ಮ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ಪ್ರಕರಣದ ಬಗ್ಗೆ ಸಿಐಡಿ ತನಿಖೆ ನಡೆಸಲು ಸರ್ಕಾರ ಆದೇಶ ನೀಡಿತ್ತು.

ಸಿಐಡಿ  ವರದಿಯ ಬಗ್ಗೆ ಗುಲ್ಬರ್ಗಾದಲ್ಲಿ ಪ್ರತಿಕ್ರಿಯೆ ನೀಡಿದಬಂಡೆ ಮಲ್ಲಮ್ಮ ಸಿಐಡಿ ತನಿಖೆ ಬಗ್ಗೆ ನಾನು ಯಾವುದೇ ನಂಬಿಕೆ ಯಿಲ್ಲ. ಪ್ರಕರಣದಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳ ಕೈವಾಡವಿದೆ ಎಂದಿದ್ದಾರೆ.  ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com