ಮಂದಾರ್ತಿ ಸಾಮೂಹಿಕ ವಿವಾಹ: 36 ಜೋಡಿಗಳು ಹಸೆಮಣೆಗೆ

ಮಂದಾರ್ತಿ: ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಿ ಸನ್ನಿಯಲ್ಲಿ ಬುಧವಾರ ನಡೆದ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ಶಿವಮೊಗ್ಗ, ಉಡುಪಿ, ದ.ಕ, ಉ.ಕ, ತುಮಕೂರು ಮತ್ತು ಚಿಕ್ಕಮಗಳೂರು ಜಿಲ್ಲೆಯ 36 ಜೋಡಿಗಳು ಸಹಸ್ರಾರು ಬಂಧುಗಳ ಸಮ್ಮುಖದಲ್ಲಿ ಹಸೆಮಣೆ ಏರಿದರು. 

ದೇವಸ್ಥಾನದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀಪತಿ ಅಡಿಗ ಮತ್ತು ಎಂ.ಗಣೇಶ್ ಅಡಿಗರ ಪೌರೋಹಿತ್ಯದ ನೇತತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. 

ದೇವಸ್ಥಾನದ ವತಿಯಿಂದ ಉಚಿತವಾಗಿ ವಧುವಿಗೆ ಕರಿಮಣಿ ಹಾಗೂ ಧಾರೆ ಸೀರೆ, ಮತ್ತು ವರನಿಗೆ ಶರ್ವಾನಿಯನ್ನು ನೀಡಲಾಯಿತು. 

ಸಾಮೂಹಿಕ ವಿವಾಹದಲ್ಲಿ ಉಡುಪಿ ಜಿಲ್ಲೆಯಿಂದ 16ಜೋಡಿ, ಶಿವಮೊಗ್ಗದಿಂದ 13 ಜೋಡಿ, ಚಿಕ್ಕಮಗಳೂರು ಜಿಲ್ಲೆಯಿಂದ 4 ಜೋಡಿ ಮತ್ತು ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ತುಮಕೂರು ಜಿಲ್ಲೆಯಿಂದ ತಲಾ ಒಂದು ಜೋಡಿ ಪಾಲ್ಗೊಂಡಿದ್ದರು. 

ವಿವಾಹವಾದ ನೂತನ ದಂಪತಿಗಳಿಗೆ ಸರಕಾರದ ವತಿಯಿಂದ ನೀಡುವ 10ಸಾವಿರ ರೂ. ಸಹಾಯಧನಕ್ಕೆ ದೇವಳದ ವತಿಯಿಂದ ಶಿಫಾರಸ್ಸು ಮಾಡಲಾಗುತ್ತದೆ. 

ಮದುವೆ ಕಾರ್ಯಕ್ರಮಕ್ಕೆ ವಧು ವರರ ಕಡೆಯಿಂದ ಆಗಮಿಸಿದ ನಾಲ್ಕು ಸಾವಿರಕ್ಕೂ ಮಿಕ್ಕಿದ ಜನರಿಗೆ ದೇವಸ್ಥಾನದ ವತಿಯಿಂದ ಉಚಿತ ಭೋಜನ ವ್ಯವಸ್ಥೆ ಮಾಡಲಾಗಿತ್ತು. 

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಕಾರ್ಯನಿರ್ವಹಣಾಕಾರಿ ಈ.ಜಿ ನಾಯಕ್, ವ್ಯವಸ್ಥಾಪನಾ ಸಮಿತಿಯ ಶೇಡಿಕೊಡ್ಲು ವಿಠಲ ಶೆಟ್ಟಿ, ಕೆ.ಪಿ ಶೇಖರ್, ಎಚ್.ಸುರೇಂದ್ರ ಶೆಟ್ಟಿ, ಗೋಪಾಲ್ ನಾಯಕ್, ಗಣೇಶ್ ಕುಂದರ್, ಮಾಲತಿ ಎಚ್.ಶೆಟ್ಟಿ, ರತ್ನ ಮರಕಾಲ್ತಿ ಹಾಗೂ ಅರ್ಚಕ ವರ್ಗ ಮತ್ತು ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com