ಮಂಗಳ ಹುಣ್ಣಿಮೆ ಆರಂಭ

ಉಡುಪಿ: ಎರಡು ವರ್ಷಗಳಿಗೊಮ್ಮೆ ಬರುವ ‘ಮಂಗಳ ಹುಣ್ಣಿಮೆ’ ಬುಧ­ವಾರ­ದಿಂದ ಆರಂಭವಾಗಿದ್ದು ಮಂಗಳ ಗ್ರಹ ಕೆಂಪಾಗಿ ಹೊಳೆದಂತೆ ಕಾಣಿಸಲಿದೆ. ಎರಡು ವರ್ಷಗಳಿಗೊಮ್ಮೆ ಈ ಮಂಗಳ ಹುಣ್ಣಿಮೆ ಸಂಭವಿಸುತ್ತದೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಡಾ.ಎ.ಪಿ.ಭಟ್‌ ತಿಳಿಸಿ­ದ್ದಾರೆ.
        ತಿಂಗಳಿಗೊಮ್ಮೆ ಚಂದ್ರನ ಹುಣ್ಣಿಮೆ ಬರುವ ಹಾಗೆ ಎರಡು ವರ್ಷಗಳಿ­ಗೊಮ್ಮೆ ಮಂಗಳನ ಹುಣ್ಣಿಮೆ ಬರು­ತ್ತದೆ. ಆಗ ಕೆಲ ದಿನಗಳು ಮಂಗಳ ಗ್ರಹ ಕೆಂಪಾಗಿ, ದೊಡ್ಡದಾಗಿ ರಾತ್ರಿಯಿಡೀ ಕಾಣಿಸಲಿದೆ.  ಪಶ್ಚಿಮದಲ್ಲಿ ಸೂರ್ಯಾ­ಸ್ತಮ ಆದೊಡನೆ ಪೂರ್ವದಲ್ಲಿ ಮಂಗಳ ಗ್ರಹ ಉದಯವಾಗಲಿದೆ.  ಸುಮಾರು ೭೭೮ ದಿವಸಗಳಿಗೊಮ್ಮೆ ಈ ಕ್ರಿಯೆ ಸಂಭವಿಸುತ್ತಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
          ಸೂರ್ಯನಿಂದ ಸುಮಾರು ೧೫ ಕೋಟಿ ಕಿ.ಮೀ. ದೂರದಲ್ಲಿ ತಿರುಗುತ್ತಿ­ರುವ ಭೂಮಿ, ಸುಮಾರು ೨೪ ಕೋಟಿ ಕಿ.ಮೀ. ದೂರದಲ್ಲಿ ತಿರುಗುತ್ತಿರುವ ಮಂಗಳಗ್ರಹ, ಭೂಮಿಯಿಂದ ಬೇರೆ ಬೇರೆ ದೂರದಲ್ಲಿರುತ್ತದೆ.
ಈ ಹುಣ್ಣಿಮೆಯ ಕೆಲದಿನ ಸಮೀಪ ಬಂದಿರುತ್ತವೆ.   ೨೦­೧೨ ಮಾರ್ಚ್‌­ನಲ್ಲಿ ೧೦ ಕೋಟಿ ಕಿ.ಮೀ,­ ೨೦೧೪ ಎಪ್ರಿಲ್‌ನಲ್ಲಿ ೯.೨ ಕೋಟಿ, ೨೦೧೬ ಮೇ ತಿಂಗಳಲ್ಲಿ ೭.೫ ಕೋಟಿ, ೨೦೧೮ ಜುಲೈ ನಲ್ಲಿ ೫.೮ ಕೋಟಿ ಕಿ.ಮೀ. ದೂರದಲ್ಲಿ ಮಂಗಳನ ಹುಣ್ಣಿಮೆ ಸಂಭವಿಸುತ್ತದೆ. ಅದರಲ್ಲೂ ಈ ಮಂಗಳನ ಹುಣ್ಣಿಮೆಯ ಸಮಯ ೧೫ ವರ್ಷಗಳಿಗೊಮ್ಮೆ ಅತೀ ಸಮೀಪ ಬರಲಿದೆ. ೨೦೦೩ ಅಗಸ್ಟ್ ೨೮ರಂದು ೫.೩ ಕೋಟಿ ಕಿ.ಮೀ. ಹೀಗೆ, ಇನ್ನು ಮುಂದೆ ಜುಲೈ ೨೭, ೨೦೧೮ರಂದು ೫.೮ ಕಿ.ಮೀ. ಬರಲಿದೆ ಎಂದು ತಿಳಿಸಿದ್ದಾರೆ.
        ರಾತ್ರಿ ೮ ಗಂಟೆಯ ಸಮಯ ಆಕಾಶ ಶುಭ್ರವಾಗಿದ್ದಲ್ಲಿ, ಪೂರ್ವ ಆಕಾಶ ನೋಡಿ ಹೊಳೆಯುವ ಕೆಂಪಾದ ಮಂಗ­ಳನ ಜೊತೆಗೆ ಚಿತ್ರಾ ನಕ್ಷತ್ರ ಕಾಣಿಸುತ್ತದೆ. ಈಶಾನ್ಯದಲ್ಲಿ ಮಿನುಗುವ ಸ್ವಾತಿ, ಉತ್ತರದ ಆಕಾಶದಲ್ಲಿ ಸಪ್ತ ಋಷಿಗಳು ಧ್ರುವ ನಕ್ಷತ್ರ, ನೆತ್ತಿಯ ಮೇಲೆ ಚಂದ್ರ, ಪಶ್ಚಿಮದಲ್ಲಿ ಮಿಥುನ ರಾಶಿಯ ಮಹಾವ್ಯಾಧ ಪುನರ್ವಸು ನಕ್ಷತ್ರದ ಬಳಿ ಹೊಳೆಯುವ ಗುರುಗ್ರಹ ಈ ತಿಂಗಳಿಡೀ ಕಾಣಿಸಲಿದೆ. ಆದ್ದರಿಂದ ಎಲ್ಲರೂ ನೋಡಿ ಆನಂದಿಸಬಹುದು ಎಂದಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com