ಮರವಂತೆಗೆ ರಾಘವೇಶ್ವರ ಶ್ರೀ ಭೇಟಿ

ಮರವಂತೆ : ಮರವಂತೆ ಮೀನುಗಾರರ ಸೇವಾ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ 81ನೇ ವರ್ಷದ ಶ್ರೀರಾಮ ಭಜನಾ ಸಪ್ತಾಹ ಸಂದರ್ಭ ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಬುಧವಾರ ಮರವಂತೆಗೆ ಭೇಟಿ ನೀಡಿದರು. 

ಸಮಿತಿ ಸದಸ್ಯರು ಅವರಿಗೆ ಸ್ವಾಗತ ಕೋರಿದರು. ದೇವರ ದರ್ಶನ ಪಡೆದ ಬಳಿಕ ಸೇವಾ ಸಮಿತಿ ಅಧ್ಯಕ್ಷ ಸೋಮಯ್ಯ ಖಾರ್ವಿ ಮತ್ತು ಮೀನುಗಾರರ ತಂಡಗಳ ಪ್ರತಿನಿಧಿಗಳು ಶ್ರೀಗಳಿಗೆ ಫಲಪುಷ್ಪ ಸಲ್ಲಿಸಿದರು. 

ಈ ಸಂದರ್ಭ ಮಾತನಾಡಿದ ಶ್ರೀಗಳು, ಮರವಂತೆ ಮೀನುಗಾರರು ಶ್ರೀರಾಮನ ಪಾರಂಪರಿಕ ಭಕ್ತರು. ಸುದೀರ್ಘ ಕಾಲದಿಂದ ಪ್ರತಿ ವರ್ಷ ಶ್ರೀರಾಮ ನವಮಿ ಸಂದರ್ಭ ರಾಮೋತ್ಸವ ಆಚರಿಸುತ್ತಾ ಬಂದಿರುವುದು ಅವರ ರಾಮಭಕ್ತಿಯ ದ್ಯೋತಕ. ಅವರ ಬದುಕು ಮತ್ತು ಕಾಯಕಕ್ಕೆ ಸದಾ ರಾಮಾನುಗ್ರಹದ ಬೆಂಬಲವಿರುತ್ತದೆ ಎಂದು ಅವರು ಹರಸಿದರು, ಉಪಸ್ಥಿತರಿದ್ದ ಎಲ್ಲರಿಗೆ ಫಲ ಮಂತ್ರಾಕ್ಷತೆ ನೀಡಿದರು. ಪ್ರಮುಖರಾದ ಎಂ.ಎಸ್. ಶೇಷ, ಚಂದ್ರ ಖಾರ್ವಿ, ಹೊನ್ನ ಖಾರ್ವಿ, ಎಂ. ಶಂಕರ ಖಾರ್ವಿ ಉಪಸ್ಥಿತರಿದ್ದರು. 

ಬುಧವಾರ ಬೆಳಗ್ಗೆ ರಾಮ ಭಜನಾ ಸಪ್ತಾಹದ ದೀಪ ಸ್ಥಾಪನೆ ನಡೆಯಿತು. ಏ. 8ರಂದು ಅಖಂಡ ಭಜನೆ, ಮಧ್ಯಾಹ್ನ ಮಹಾ ಅನ್ನ ಸಂತರ್ಪಣೆ, ಸಂಜೆ ಪುರ ಮೆರವಣಿಗೆ ನಡೆದು, 9ರಂದು ಬೆಳಗ್ಗೆ ಭಜನಾ ಮಂಗಲ ನಡೆಯಲಿದೆ ಎಂದು ಸಮಿತಿ ಪ್ರಕಟಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com