ವಾರಾಹಿ ಯೋಜನಾ ಪ್ರದೇಶಕ್ಕೆ ಸಚಿವ ಸೊರಕೆ ಭೇಟಿ. ಮೇ 15ರ ಒಳಗೆ ಕಾಮಗಾರಿ ಪೂರ್ಣಗೊಳಿಸಲು ಆದೇಶ

ಕುಂದಾಪುರ: ನೆನೆಗುದಿಗೆ ಬಿದ್ದಿರುವ ವಾರಾಹಿ ಯೋಜನೆ ಕಾಮಗಾರಿಯ ಪ್ರಗತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಗುರುವಾರ ವೀಕ್ಷಿಸಿದರು.
      ವಾರಾಹಿ ಯೋಜನೆ ಕಾಮಗಾರಿಯನ್ನು ಮೇ 15ರ ಒಳಗೆ ಪೂರ್ಣಗೊಳಿಸುವಂತೆ ಅವರು ಇಲಾಖಾಧಿಕಾರಿಗಳಿಗೆ ಆದೇಶ ನೀಡಿದರು.
     ಕಳೆದ 34 ವರ್ಷಗಳಿಂದ ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಯಾಗಿರುವ ವಾರಾಹಿ ಯೋಜನೆಯ ಅಸಮರ್ಪಕ ಕಾಮಗಾರಿ, ಭೂಮಿ ಕಳೆದುಕೊಂಡವರ ಅಳಲು, ಕಾಮಗಾರಿಯಿಂದ ಕೃಷಿ ಹಾಗೂ ಕೃಷಿ ಭೂಮಿಗೆ ಆದ ಹಾನಿ ಹೀಗೆ ರೈತರಿಗೆ ವಾರಾಹಿ ಯೋಜನೆಯಿಂದಾದ ನೂರಾರು ಸಮಸ್ಯೆಗಳ ಬಗ್ಗೆ ಅವರು ಪರಿಶೀಲನೆ ಮಾಡಿದರು.
     ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಕೂಡಲೇ ಪೂರ್ಣಗೊಳಿಸಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ರೀತಿಯಲ್ಲಿ ಸಂಪೂರ್ಣ ಹಣ ನೀಡಬೇಕು. ನೆನೆಗುದ್ದಿಗೆ ಬಿದ್ದಿರುವ ಉಳಿದ ಕಾಮಾಗಾರಿಯನ್ನು ಮೇ 15ರ ಒಳಗೆ ಮುಗಿಸಬೇಕು ಎಂದು ಸಚಿವರು ಗುತ್ತಿಗೆದಾರರು ಹಾಗೂ ಇಲಾಖೆ ಎಂಜಿನಿಯರ್‌ಗಳಿಗೆ ಆದೇಶಿಸಿದರು.
     ಡೀಮ್ಡ್ ಫಾರೆಸ್ಟ್‌ ಹಾಗೂ ರಿಜರ್ವ್‌ ಫಾರೆಸ್ಟ್‌ ಬಗೆಗಿನ ಕೆಲವೊಂದು ಸಮಸ್ಯೆ ಬಗೆಹರಿದಿದೆ. ಇನ್ನು°ಳಿದ ಸಮಸ್ಯೆಗಳನ್ನು ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಸರ್ವೆ ನಡೆಸಿ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯೋಜನೆಯಿಂದ ಹಾನಿಯಾದ ಕೃಷಿ ಭೂಮಿಗೆ ಪರಿಹಾರ ನೀಡಬೇಕು. ಕಿರ್ಲಾಡಿಯ ಸಂತ್ರಸ್ತರ ಸಮಸ್ಯೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
     ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ನಾಯಕ್‌, ವಾರಾಹಿ ಪ್ರಭಾರ ಮುಖ್ಯ ಅಭಿಯಂತ ಆರ್‌. ನಟರಾಜ್‌, ಕಾರ್ಯಪಾಲ ಎಂಜಿನಿಯರ್‌ಗಳಾದ ಶ್ರೀಕಂಠಯ್ಯ ಹಾಗೂ ಶಿವಲಿಂಗಯ್ಯ, ಸಹಾಯಕ ಕಾರ್ಯಪಾಲ ಎಂಜಿನಿಯರ್‌ ಸದಾನಂದ ಕಲ್ಮಾಡಿ, ಪ್ರಭಾಕರ್‌, ಜಯಕರ, ಸಹಾಯಕ ಎಂಜಿನಿಯರ್‌ ಪ್ರಸನ್ನ, ಎನ್‌.ಜಿ. ಭಟ್‌, ಕಿರಣ್‌, ಪ್ರಮೋದ್‌, ಶಂಕರನಾರಾಯಣ ವಲಯಾರಣ್ಯಾಧಿಕಾರಿ ವಿನಯ್‌ ಕುಮಾರ್‌, ಫಾರೆಸ್ಟರ್‌ ನರಸಿಂಹ ಕಾಂಳೆ, ಎಸ್‌.ಎನ್‌.ಸಿ. ಕಂಪೆನಿಯ ವ್ಯವಸ್ಥಾಪಕ ರಾಘವ ಶೆಟ್ಟಿ, ಕುಂದಾಪುರ ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ವಿಕಾಸ್‌ ಹೆಗ್ಡೆ ಬಸ್ರುರು, ಸಿದ್ದಾಪುರ ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ಎಸ್‌.ಕೆ. ವಾಸುದೇವ ಪೈ, ಉಪಾಧ್ಯಕ್ಷ ಸುರೇಂದ್ರ ಶೆಟ್ಟಿ, ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌. ಸುಧಾಕರ ಶೆಟ್ಟಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ಸಿದ್ದಾಪುರ ಗ್ರಾ.ಪಂ. ಸದಸ್ಯೆ ಚಂದ್ರಾವತಿ ಎಸ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com