ಎಎಪಿಯ ಮೇಧಾ ಪಾಟ್ಕರ್‌ಗೆ ಅಣ್ಣಾ ಬೆಂಬಲ

ಮುಂಬಯಿ: ಭ್ರಷ್ಟಾಚಾರ ವಿರೋಧಿ ಆಂದೋಲನದ ಹರಿಕಾರ ಅಣ್ಣಾ ಹಜಾರೆ ಅವರು ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಸಮಾಜ ಕಾರ್ಯಕರ್ತೆಯಾಗಿರುವ ಎಎಪಿಯ ಈಶಾನ್ಯ ಮುಂಬಯಿ ಲೋಕಸಭಾ ಕ್ಷೇತ್ರದ  ಅಭ್ಯರ್ಥಿ ಮೇಧಾ ಪಾಟ್ಕರ್‌ ಅವರನ್ನು  ಬೆಂಬಲಿಸಿದ್ದಾರೆ.
   ಜತೆಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಇಬ್ಬರು ಮಹಾಯುತಿ ಅಭ್ಯರ್ಥಿಗಳನ್ನು ಕೂಡ ಅಣ್ಣಾ ಹಜಾರೆ ಬೆಂಬಲಿಸಿದ್ದಾರೆ. 
    ಇದೇ ವೇಳೆ ಮೇಧಾ ಪಾಟ್ಕರ್‌ ಅವರು ಸ್ವಾಭಿಮಾನಿ ಶೇತ್ಕರಿ ಸಂಘಟನೆಯ (ಎಸ್‌ಎಸ್‌ಎಸ್‌) ಇಬ್ಬರು ಅಭ್ಯರ್ಥಿಗಳಾಗಿರುವ ರಾಜು ಶೆಟ್ಟಿ ಮತ್ತು ಸದಾಭಾವು ಖೋಟ್‌ ಅವರನ್ನು ಬೆಂಬಲಿಸಿದ್ದಾರೆ. ಶೇತ್ಕರಿ ಸಂಘಟನೆಯು ಬಿಜೆಪಿ ನೇತೃತ್ವದ ಮಹಾಯುತಿಯ (ಬೃಹತ್‌ ಮೈತ್ರಿ ಕೂಟ) ಒಂದು ಅಂಗ ಸಂಸ್ಥೆಯಾಗಿದೆ.
      ರಾಜು ಶೆಟ್ಟಿ ಮತ್ತು ಖೋಟ್‌ ಅವರು ಪಶ್ಚಿಮ ಮಹಾರಾಷ್ಟ್ರದ ಹತ್ಕನಂಗಳೆ ಮತ್ತು ಮಾಧಾ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com