ಭಂಡಾರ್‌ಕಾರ್ಸ ಕಾಲೇಜಿನಲ್ಲಿ ಮಸ್ಟರಿಂಗ್‌

ಕುಂದಾಪುರ: ಕುಂದಾಪುರ-ಬೈಂದೂರು ವಿಧಾನಸಭಾ ಚುನಾವಣೆಯ ಮಸ್ಟರಿಂಗ್‌ ಕಾರ್ಯ ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜಿನಲ್ಲಿ ಶನಿವಾರ ಜರಗಿತು. ಕಾಲೇಜಿನಲ್ಲಿ ತೆರೆಯಲಾದ ಮಸ್ಟರಿಂಗ್‌ ಕೇಂದ್ರದಲ್ಲಿ ಮತಗಟ್ಟೆ ಅಧಿಧಿಕಾರಿಗಳಿಗೆ ತಹಶೀಲ್ದಾರ್‌ ಗಾಯತ್ರಿ ನಾಯಕ್‌ ಅವರು ಮಾಹಿತಿ ನೀಡಿದರು. .

ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮಸ್ಟರಿಂಗ್‌ ನಡೆಸಲಾಯಿತು. ಬೂತ್‌ ಮಟ್ಟದ ಅಧಿಕಾರಿಗಳು, ಪೊಲೀಸ್‌ ಸಿಬಂದಿ ಮತ ಯಂತ್ರ ಸೇರಿದಂತೆ ಇತರೆ ವಸ್ತುಗಳೊಂದಿಗೆ ಮತಗಟ್ಟೆಗೆ ತೆರಳಿದರು.

ಕುಂದಾಪುರ ವಿಧಾನ ಸಭಾ ಕ್ಷೇತ್ರದ 215 ಹಾಗೂ ಬೈಂದೂರು ಕ್ಷೇತ್ರದ 240ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ಪಿಆರ್‌ಓ, ಎಪಿಆರ್‌ಓ, ಸಹಾಯಕರು, ಅಗತ್ಯವಾದ ಪೊಲೀಸ್‌, ಹೋಂ ಗಾರ್ಡ್‌ಗಳನ್ನು ನಿಯೋಜಿಸಲಾಗಿರುತ್ತದೆ. ಉಡುಪಿ ತಾಲೂಕು, ಕುಂದಾಪುರ, ಬೈಂದೂರುಗಳಿಂದ ಆಗಮಿಸಿದ ನಿಯೋಜಿತ ಅಧಿಕಾರಿಗಳು ತಮ್ಮ ಬೂತ್‌ ಮತಯಂತ್ರ, ಮತದಾರರ ಪಟ್ಟಿ, ಮತದಾರರ ಪಟ್ಟಿ, ಪ್ರಕಟನಾ ಪತ್ರ, ಶಾಯಿ ಸೇರಿದಂತೆ ಅಗತ್ಯ ವಸ್ತುಗಳ ಪರಿಶೀಲನೆ ನಡೆಸಿ ಬಸ್ಸುಗಳಲ್ಲಿ ತೆರಳುತ್ತಿದ್ದ ದೃಶ್ಯ ಕಂಡು ಬಂತು.

ಕುಂದಾಪುರ ಕ್ಷೇತ್ರದಲ್ಲಿ 8 ಅತಿಸೂಕ್ಷ್ಮ ನಕ್ಸಲ್‌ ಮತಗಟ್ಟೆಗಳು, 27ಅತಿ ಸೂಕ್ಷ್ಮ ಮತಗಟ್ಟೆಗಳು, 79 ಸೂಕ್ಷ್ಮ ಮತಗಟ್ಟೆಗಳು, 101 ಸಾಮಾನ್ಯ ಮತಗಟ್ಟೆಗಳಿವೆ. ಬೈಂದೂರು ವಿದಾನ ಸಭಾ ಕ್ಷೇತ್ರದಲ್ಲಿ 18 ಅತಿಸೂಕ್ಷ್ಮ ನಕ್ಸಲ್‌ಪೀಡಿತ ಪ್ರದೇಶ, 29 ಅತಿ ಸೂಕ್ಷ್ಮ ಮತಗಟ್ಟೆಗಳು, 88 ಸೂಕ್ಷ್ಮ ಮತಗಟ್ಟೆಗಳು ಹಾಗೂ 105 ಸೂಕ್ಷ್ಮ ಮತಗಟ್ಟೆಗಳಿವೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com