ನಳಿನ್‌ ದೇಶದ 6ನೇ ಅತ್ಯುತ್ತಮ ಸಂಸದ

ಟೈಮ್ಸ್‌ ಸರ್ವೇ ವರದಿ -  ನಳಿನ್‌ ಕುಮಾರ್‌ ಕಟೀಲು ದೇಶದಲ್ಲಿಯೇ 6ನೇ ಸ್ಥಾನ 
ಮಂಗಳೂರು : ದೇಶದಲ್ಲಿ ಸಮಗ್ರ ಸಾಧನೆ ಮಾಡಿದ ಅತ್ಯುತ್ತಮ ಸಂಸದರ ಪೈಕಿ ಮಂಗಳೂರು ಲೋಕಸಭೆ ಸದಸ್ಯ ನಳಿನ್‌ ಕುಮಾರ್‌ ಕಟೀಲು ದೇಶದಲ್ಲಿಯೇ 6ನೇ ಸ್ಥಾನ ಪಡೆದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್‌ ಸಿಂಹ ನಾಯಕ್‌ ತಿಳಿಸಿದ್ದಾರೆ.
        ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಟಿತ ಟೈಮ್ಸ್‌ ಸಮೂಹ ಎಡಿಆರ್‌ - ದಕ್ಷಾ ಮೂಲಕ ದೇಶದಾದ್ಯಂತ 500ಕ್ಕೂ ಮಿಕ್ಕಿ ಲೋಕಸಭಾ ವ್ಯಾಪ್ತಿಯ 2,50,000 ಮಂದಿಯನ್ನು ಸರ್ವೇ ನಡೆಸಿ ನಳಿನ್‌ಕುಮಾರ್‌ ಕಟೀಲು ಅವರಿಗೆ 6ನೇ ಸ್ಥಾನ ನೀಡಿದೆ. ಅತ್ಯುತ್ತಮ ಸಾಧನೆಗಾಗಿ ನೀಡಲಾಗುವ ಒಟ್ಟು 10 ಅಂಕಗಳಲ್ಲಿ ನಳಿನ್‌ ಕುಮಾರ್‌ ಕಟೀಲು 8.08 ಅಂಕಗಳನ್ನು ಪಡೆದು ದೇಶದಲ್ಲಿಯೇ 6ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ತನ್ನ ಮೊದಲ ಅವಧಿಯಲ್ಲಿಯೇ ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ.
      ಜನಸಾಮಾನ್ಯರು ತಮ್ಮ ಸಂಸದರಿಂದ ಯಾವ್ಯಾವ ಕೆಲಸಗಳನ್ನು ಬಯಸಿದ್ದಾರೆ, ಅದಕ್ಕೆ ಸಂಸದರು ಯಾವ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬ ಅಂಶಗಳ ಆಧಾರದಲ್ಲಿ ಜನರೇ ತನ್ನ ಸಂಸದರಿಗೆ ಅಂಕಗಳನ್ನು ನೀಡಿದ್ದಾರೆ. ಅದರಂತೆ ದಕ್ಷಿಣಕನ್ನಡ ಲೋಕಸಭೆ ಕ್ಷೇತ್ರದಲ್ಲಿ ನಳಿನ್‌ ಕುಮಾರ್‌ ಕಟೀಲು ಅಭಿವೃದ್ಧಿ ಕಾರ್ಯಗಳು ಹಾಗೂ ಜನರ ಆಶೋತ್ತರಗಳಿಗೆ ಅತ್ಯುತ್ತಮವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಿಂದ ಜಿಲ್ಲೆಯಾದ್ಯಂತ ನಡೆಸಿದ ಸರ್ವೇಯಲ್ಲಿ ಜನರು ಉತ್ತಮ ಅಂಕವನ್ನು ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ನೀಡಿದ್ದಾರೆ. ತಮ್ಮ ಸಂಸದರಿಗೆ ಜನರೇ ನೀಡಿದ ಅಂಕಗಳ ಆಧಾರದಲ್ಲಿ ಪ್ರತಿಷ್ಠಿತ ಟೈಮ್ಸ್‌ ಸಮೂಹ ಈ ಸ್ಥಾನ ನೀಡಿದ್ದು, ನಳಿನ್‌ಕುಮಾರ್‌ ಕಟೀಲು ಇಡೀ ದೇಶದಲ್ಲಿ 6ನೇ ಸ್ಥಾನ ಪಡೆದಿರುವುದು ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

   ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಮೊದಲ ಸ್ಥಾನ ಪಡೆದಿರುವ ನಳಿನ್‌ ಕುಮಾರ್‌ ಕಟೀಲು, ಇದೀಗ ಇಡೀ ದೇಶದ ಅತ್ಯುತ್ತಮ ಸಂಸದರ ಪೈಕಿ 6ನೇ ಸ್ಥಾನ ಪಡೆದು ರಾಜ್ಯದ ಅತ್ಯುತ್ತಮ ಸಂಸದರಾಗಿ ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ಬಾರಿಗೆ ಸಂಸತ್‌ಗೆ ಆಯ್ಕೆಯಾದ ನಳಿನ್‌ ಕುಮಾರ್‌ ಕಟೀಲು ತನ್ನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಬರುವುದು ಖಚಿತವಾಗಿದ್ದು, ಇಂತಹ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಜಿಲ್ಲೆಯ ಜನತೆ ಮತ್ತೂಮ್ಮೆ ಆಶೀರ್ವಾದ ಮಾಡಬೇಕು. ಈ ಮೂಲಕ ಜಿಲ್ಲೆಯ ಅಭಿವೃದ್ಧಿಯ ಚಿತ್ರಣ ಬದಲಾಯಿಸಲು ಸಾಧ್ಯವಿದೆ. ಸಂಸದರಾಗಿ ನಳಿನ್‌ ಕುಮಾರ್‌ ಕಟೀಲು ತನ್ನ ಸಾಮರ್ಥ್ಯವನ್ನು ಸಾಧನೆ ಮೂಲಕ ಪ್ರದರ್ಶಿಸಿದ್ದಾರೆ. ಇನ್ನಷ್ಟು ಸಾಧನೆ ಮಾಡಲು ಅವರನ್ನು ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಜಿಲ್ಲೆಯ ಜನತೆಗೆ ವಿನಂತಿಸುತ್ತಿದ್ದೇನೆ ಎಂದು ಪ್ರತಾಪ್‌ ಸಿಂಹ ನಾಯಕ್‌ ಹೇಳಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com