ವರದಿ ಬಹಿರಂಗ. ಸಿಕ್ಖರಿಗೆ ಹತ್ಯಾಕಾಂಡಕ್ಕೆ ಕಾಂಗ್ರೆಸ್ ಹೊಣೆ.


ಹೊಸದಿಲ್ಲಿ: 1984ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಅನುಸರಿಸಿ ದಿಲ್ಲಿಯಲ್ಲಿ ನಡೆದ ಸಿಕ್ಖ ವಿರೋಧಿ ನರಮೇಧವನ್ನು ತಡೆಯಲು ಕ್ರಮಕೈಗೊಳ್ಳದಂತೆ ಮತ್ತು ಆ ಮೂಲಕ ಸಿಕ್ಖರಿಗೆ ಸರಿಯಾದ ಪಾಠವನ್ನು ಕಲಿಸುವಂತೆ ನೋಡಿಕೊಳ್ಳಲು ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷದ ಆಣತಿಯಂತೆ ಅಂದಿನ ಹಿರಿಯ ಪೊಲೀಸ್‌ ಅಧಿಕಾರಿಗಳು ಸರಕಾರದೊಂದಿಗೆ ಶಾಮೀಲಾಗಿ ನರಮೇಧವನ್ನು ಮೂಕ ಪ್ರೇಕ್ಷಕರಾಗಿ ಕಾಣುತ್ತಾ ನಿಂತುಕೊಂಡರು ಎಂಬ ವಿಷಯವನ್ನು ಕೋಬ್ರಾ ಪೋಸ್ಟ್‌ ನ ರಹಸ್ಯ ಕಾರ್ಯಾಚರಣೆ ವರದಿ ಬಹಿರಂಗಪಡಿಸಿದೆ.

ಸಿಕ್ಖರನ್ನು ಅಟ್ಟಾಡಿಸಿ ಹೊಡೆದು ಕೊಲ್ಲುತ್ತಿದ್ದ ದುರುಳರ ವಿರುದ್ಧ ದಿಲ್ಲಿಯ ಅಂದಿನ ಹಿರಿಯ ಪೊಲೀಸ್‌ ಅಧಿಕಾರಿಗಳು ಸರಕಾರದ ಆಣತಿಯಂತೆ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದುದು ಕೋಬ್ರಾಪೋಸ್ಟ್‌ ನ ಚ್ಯಾಪ್ಟರ್‌ 84 ನಡೆಸಿರುವ ರಹಸ್ಯ ವಿಚಾರಣೆಯಿಂದ ಬಹಿರಂಗವಾಗಿದೆ. 

ಈ ರೀತಿ ಅಂದು ನಿಷ್ಕ್ರಿಯತೆಯನ್ನು ತೋರಿದ್ದ ಹಿರಿಯ ಪೊಲೀಸ್‌ ಅಧಿಕಾರಿಗಳು ಅನಂತರದಲ್ಲಿ ಅಪರಾಧಿಗಳ ವಿರುದ್ಧ ಕ್ರಮ ಕೈತೆಗೆದುಕೊಳ್ಳದಿದ್ದ ತಮ್ಮ 'ವೈಫ‌ಲ್ಯ'ವನ್ನು ಒಪ್ಪಿಕೊಂಡಿರುವುದನ್ನು ಕೋಬ್ರಾ ಪೋಸ್ಟ್‌ ರಹಸ್ಯವಾಗಿ ದಾಖಲಿಸಿಕೊಂಡಿದೆ. 

ಈ ರೀತಿ ತಪ್ಪೊಪ್ಪಿಕೊಂಡ ಪೊಲೀಸ್‌ ಅಧಿಕಾರಿಗಳೆಂದರೆ ಶೂರವೀರ್‌ ಸಿಂಗ್‌ ತ್ಯಾಗಿ (ಕಲ್ಯಾಣಪುರಿ ಪೊಲೀಸ್‌ ಠಾಣಾಧಿಕಾರಿ), ರೋಹಟಾಸ್‌ ಸಿಂಗ್‌ (ದಿಲ್ಲಿ ಕಂಟೋನ್ಮೆಂಟ್‌ ಎಸ್‌ಎಚ್‌ಓ), ಎಸ್‌ ಎನ್‌ ಭಾಸ್ಕರ್‌ (ಕೃಷ್ಣನಗರ ಎಸ್‌ಎಚ್‌ಓ), ಓ ಪಿ ಯಾದವ್‌ (ಶ್ರೀನಿವಾಸಪುರಿ ಎಚ್‌ಎಸ್‌ಓ) ಮತ್ತು ಜೈಪಾಲ್‌ ಸಿಂಗ್‌ (ಮೆಹರೌಲಿ ಎಚ್‌ಎಸ್‌ಓ).

ಕೋಬ್ರಾ ಪೋಸ್ಟ್‌ನ ಈ ರಹಸ್ಯ ವರದಿಗಳು ಇದೀಗ ಬಹಿರಂಗವಾಗಿದ್ದು ಇದನ್ನು ಆಧರಿಸಿಕೊಂಡು ಬಿಜೆಪಿ ಸಹಿತ ಹೆಚ್ಚಿನ ರಾಜಕೀಯ ಪಕ್ಷಗಳು ಕಾಂಗ್ರೆಸ್‌ ಮೇಲೆ ಮುಗಿ ಬೀಳಲು ಆರಂಭಿಸಿವೆ !

Udayavani | Apr 22, 2014

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com