ಮಾಜಿ ಮಾಧ್ಯಮ ಸಲಹೆಗಾರನ ಪುಸ್ತಕದಿಂದ ಪ್ರಧಾನಿಗೆ ಬೇಸರ

ನವದೆಹಲಿ: ತಮ್ಮ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಬರೆದಿರುವ ಪುಸ್ತಕದಿಂದ ಪ್ರಧಾನಿ ಮನಮೋಹನ ಸಿಂಗ್‌ ತೀವ್ರ ಮನನೊಂದಿದ್ದು, ಬಾರು ಬೆನ್ನಿಗೆ ಇರಿದರು ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

'ಮನಮೋಹನ ಸಿಂಗ್‌: ದಿ ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಪುಸ್ತಕದಲ್ಲಿರುವ ಸಂಗತಿಗಳ ಬಗ್ಗೆ ಮನಮೋಹನ ಸಿಂಗ್‌ ಬಹಳ ಬೇಸರಗೊಂಡಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ. ಶುಕ್ರವಾರವಷ್ಟೇ ಪ್ರಧಾನಿ ಕಚೇರಿಯು ಈ ಪುಸ್ತಕವನ್ನು 'ಕಟ್ಟುಕಥೆ' ಎಂದು ಬಣ್ಣಿಸಿತ್ತು.

ಆದರೆ, ತಾವು ಬರೆದ ಪುಸ್ತಕವನ್ನು ಸಂಜಯ್‌ ಬಾರು ಸಮರ್ಥಿಸಿಕೊಂಡಿದ್ದಾರೆ. 'ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರದ ಉನ್ನತ ಹಂತದಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಜನರಿಗಿದೆ. ಮಾಹಿತಿ ಹಕ್ಕು ಕಾಯ್ದೆಯ ಮೂಲ ತತ್ವವೂ ಇದೇ. ಈ ಪುಸ್ತಕದಲ್ಲಿ ನಾನು ಶೇ.50ರಷ್ಟನ್ನು ಮಾತ್ರ ಹೇಳಿದ್ದೇನೆ. ಹೇಳಬೇಕಿರುವುದು ಇನ್ನೂ ಸಾಕಷ್ಟಿದೆ' ಎಂದು ಅವರು ಹೇಳಿದ್ದಾರೆ.

'ನನ್ನ ಉದ್ದೇಶವನ್ನು ಯಾರೂ ಪ್ರಶ್ನಿಸುವಂತಿಲ್ಲ. ಸರ್ಕಾರದಲ್ಲಿ ನಾನು ನೋಡಿದ್ದೇನು ಎಂಬುದರ ದಾಖಲೆಯದು. ಇಂತಹ ಹೆಚ್ಚೆಚ್ಚು ಪುಸ್ತಕಗಳು ಬರಬೇಕು. ಸರ್ಕಾರದಲ್ಲಿ ಕೆಲಸ ಮಾಡಿದವರು ಪುಸ್ತಕ ಬರೆಯುವುದು ವಿದೇಶಗಳಲ್ಲಿ ಆರೋಗ್ಯಕರ ಸಂಪ್ರದಾಯ' ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಚುನಾವಣೆಯ ಸಮಯದಲ್ಲಿ ಈ ಪುಸ್ತಕ ಬಿಡುಗಡೆ ಮಾಡಿದ್ದೇಕೆ ಎಂಬ ಪ್ರಶ್ನೆಗೆ, ಅದನ್ನು ನಿರ್ಧರಿಸುವವನು ನಾನಲ್ಲ, ಪ್ರಕಾಶಕರು ಎಂದು ಬಾರು ಹೇಳಿದ್ದಾರೆ.

'ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌' ಪುಸ್ತಕದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮನಮೋಹನ ಸಿಂಗ್‌ ಅವರ ರೆಕ್ಕೆಪುಕ್ಕ ಕತ್ತರಿಸಿತ್ತು, ಅವರು ಸೋನಿಯಾ ಆಣತಿಯಂತೆ ನಡೆಯುವ ಪ್ರಧಾನಿಯಾಗಿದ್ದರು ಎಂದು ಬಾರು ಬರೆದಿದ್ದರು. ಇದು ತೀವ್ರ ಚರ್ಚೆ ಹುಟ್ಟುಹಾಕಿದೆ.

ಬಾರು ಬರೆದಿದ್ದು ಸರಿಯಲ್ಲ- ಚಿದು:

ಸರ್ಕಾರ ನಡೆಸುವಾಗ ಪ್ರತಿಯೊಂದಕ್ಕೂ ಮನಮೋಹನ ಸಿಂಗ್‌ ಅವರು ಸೋನಿಯಾ ಗಾಂಧಿಯವರನ್ನು ಕೇಳಬೇಕಿತ್ತು ಎಂಬ ಪುಸ್ತಕದಲ್ಲಿರುವ ಸಂಗತಿಯನ್ನು ವಿತ್ತ ಸಚಿವ ಪಿ.ಚಿದಂಬರಂ ನಿರಾಕರಿಸಿದ್ದಾರೆ.

'ಕಳೆದ 10 ವರ್ಷದಲ್ಲಿ ಯಾವತ್ತೂ ಕಡತ ಅಂತಿಮಗೊಳಿಸಲು ಸೋನಿಯಾ ಮನೆಗೆ ಪ್ರಧಾನಿ ಹೋಗಿದ್ದಿಲ್ಲ. ತನಗೆ ಈ ಪರಿಸ್ಥಿತಿಯಿದೆ ಎಂದು ಒಮ್ಮೆಯೂ ಪ್ರಧಾನಿ ನನ್ನ ಬಳಿ ಹೇಳಿಲ್ಲ. ಪ್ರಜಾಪ್ರಭುತ್ವದಲ್ಲಿ ಕೆಲ ನಿರ್ಧಾರಗಳನ್ನು ಸರ್ಕಾರದಲ್ಲಿ ತೆಗೆದುಕೊಳ್ಳಲಾಗುತ್ತದೆ, ಇನ್ನು ಕೆಲ ನಿರ್ಧಾರಗಳನ್ನು ಪಕ್ಷದ ಜೊತೆ ಚರ್ಚಿಸಿ ತೆಗೆದುಕೊಳ್ಳಲಾಗುತ್ತದೆ. ಇದು ರಾಜಕೀಯ ವ್ಯವಸ್ಥೆಯಲ್ಲಿ ನಡೆಯುವ ಸರ್ಕಾರ' ಎಂದು ಚಿದು ಹೇಳಿದ್ದಾರೆ.

ಆದರೆ, ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್‌.ಸುಬ್ರಮಣಿಯನ್‌ ಅವರು ಪುಸ್ತಕದಲ್ಲಿರುವುದು ನಿಜ ಎಂದು ಹೇಳಿದ್ದಾರೆ. 'ಇದರಲ್ಲಿ ಹೊಸತೇನೂ ಇಲ್ಲ. ಎಲ್ಲರಿಗೂ ಗೊತ್ತಿರುವುದನ್ನೇ ಸಂಜಯ್‌ ಬರೆದಿದ್ದಾರೆ' ಎಂದಿದ್ದಾರೆ.

: ತಮ್ಮ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬಾರು ಬರೆದಿರುವ ಪುಸ್ತಕದಿಂದ ಪ್ರಧಾನಿ ಮನಮೋಹನ ಸಿಂಗ್‌ ತೀವ್ರ ಮನನೊಂದಿದ್ದು, ಬಾರು ಬೆನ್ನಿಗೆ ಇರಿದರು ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಇತರೆ ಸುದ್ದಿಗಳು:

ಈ ಸುದ್ದಿಯನ್ನು Share ಮಾಡಿ :

0 comments:

Post a Comment

© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com