ವಾಜಪೇಯಿ ಅತ್ಯಂತ ದುರ್ಬಲ ಪ್ರಧಾನಿ: ಸಂಜಯ್‌ ಝಾ

ಹೊಸದಿಲ್ಲಿ: ಸ್ವತಂತ್ರ ಭಾರತ ಕಂಡಿರುವ ಅತ್ಯಂತ ದುರ್ಬಲ ಪ್ರಧಾನಿ ಎಂದರೆ ಅಟಲ್‌ ಬಿಹಾರಿ ವಾಜಪೇಯಿ. ಗುಜರಾತ್‌ ನರಮೇಧಕ್ಕಾಗಿ ನರೇಂದ್ರ ಮೋದಿಯನ್ನು ಅವರು ಕಿತ್ತೆಯಲು ಬಯಸಿದರೂ ಬಿಜೆಪಿ ಒಡ್ಡಿದ ಬೆದರಿಕೆಯಿಂದಾಗಿ ಅವರಿಗೆ ಹಾಗೆ ಮಾಡಲಾಗಲಿಲ್ಲ ಎಂದು ಕಾಂಗ್ರೆಸ್‌ನ ಸಂಜಯ್‌ ಝಾ ಹೇಳಿದ್ದಾರೆ.

ಡಾ| ಮನಮೋಹನ್‌ಸಿಂಗ್‌ ಅವರು ಯುಪಿಎ ಸರಕಾರದಲ್ಲಿ  ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕೈಗೊಂಬೆಯಾಗಿದ್ದರು ಎಂದು ಸಿಂಗ್‌ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್‌ ಬರು ಮತ್ತು ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಪರಾಕ್‌ ಅವರು ತಮ್ಮ ಕೃತಿಗಳಲ್ಲಿ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಟೀಕೆ, ಖಂಡನೆಗೆ ಕಾಂಗ್ರೆಸ್‌ ಗುರಿಯಾಗಿರುವ ಈ ಸಂದರ್ಭದಲ್ಲಿ ಸಂಜಯ್‌ ಝಾ ಅವರು ಕಾಂಗ್ರೆಸ್‌ನ ಮುಖ ಉಳಿಸಲು ಈ ರೀತಿ ಟ್ವೀಟ್‌ ಮಾಡಿರುವುದು ಸಹಜವೇ ಆಗಿದೆ.

ಸಂಜಯ್‌ ಝಾ ಅವರ ಟ್ವೀಟ್‌ ಪ್ರಕಾರ ವಾಜಪೇಯಿ ಅವರು ಉಗ್ರರಿಗೆ ಸಂಸತ್ತಿನ ಮೇಲೆ ದಾಳಿ ಎಸಗಲು ಅವಕಾಶ ಮಾಡಿಕೊಟ್ಟ ದೇಶದ ಅತ್ಯಂತ ದುರ್ಬಲ ಪ್ರಧಾನಿ; ಕಂದಹಾರ್‌ ವಿಮಾನ ಅಪಹರಿಸಿದವರಿಗೆ ಮಣಿದು ಅವರ ಆದೇಶದ ಪ್ರಕಾರ ಭಾರತದ ಜೈಲಿನಲ್ಲಿದ್ದ ಉಗ್ರರನ್ನು ಬೆಂಗಾವಲಲ್ಲಿ ಬಿಡುಗಡೆ ಮಾಡಿ ಒತ್ತೆಯಾಳುಗಳನ್ನು ವಿನಿಮಯಿಸಿಕೊಂಡ ದುರ್ಬಲ ಪ್ರಧಾನಿ ಅಟಲ್‌ !

ಭಾರತೀಯ ನೆಲದಲ್ಲಿ ಒಂದು ರಾತಿ ಉಳಿದುಕೊಳ್ಳಲು ಪಾಕ್‌ ಅಧ್ಯಕ್ಷ ಮುಷರಫ್ ಗೆ ಅವಕಾಶ ನೀಡಿದ ದುರ್ಬಲ ಪ್ರಧಾನಿ ಅಟಲ್‌, ಕಾರ್ಗಿಲ್‌ ಸಮರದಲ್ಲಿ ಹಲವು ಭಾರತೀಯ ಸೈನಿಕರನ್ನು ಬಲಿಗೊಟ್ಟ ಹೊರತಾಗಿಯೂ ಪಾಕ್‌ ಪ್ರಧಾನಿ ನವಾಜ್‌ ಶರೀಫ್ ಅವರನ್ನು ಆಲಂಗಿಸಿಕೊಂಡ ದುರ್ಬಲ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಎಂದು  ಸಂಜಯ್‌ ಝಾ ಹೇಳಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com