ಕನ್ನಡ ನಾಮಫ‌ಲಕ : ನಿಯಮ ರದ್ದು

ಬೆಂಗಳೂರು: ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲಿ ವಾಣಿಜ್ಯ ಸಂಸ್ಥೆಗಳು ಮಾತೃಭಾಷೆಯಲ್ಲಿ ನಾಮಫ‌ಲಕ ಹಾಕುವುದು ಕಡ್ಡಾಯ. ಅದೇ ಮಾದರಿ ಕರ್ನಾಟಕದಲ್ಲಿ ಖಾಸಗಿ ವಾಣಿಜ್ಯ ಸಂಸ್ಥೆಗಳೂ ಕನ್ನಡದಲ್ಲೇ ನಾಮಫ‌ಲಕ ಹಾಕಬೇಕು ಎಂಬ ಕನ್ನಡಿಗರ ಆಶಯಕ್ಕೆ ಹೈಕೋರ್ಟ್‌ ತೀರ್ಪು ಮರ್ಮಾಘಾತ ನೀಡಿದೆ.

"ರಾಜ್ಯದ ಎಲ್ಲ ವಾಣಿಜ್ಯ ಸಂಸ್ಥೆಗಳು ನಾಮಫ‌ಲಕಗಳಲ್ಲಿ ಕನ್ನಡ ಬಳಸಬೇಕು. ಎಲ್ಲೆಲ್ಲಿ ಕನ್ನಡದ ಜತೆಗೆ ಬೇರೆ ಭಾಷೆ ಗಳನ್ನು ಬಳಸಲಾಗುತ್ತದೆಯೋ, ಅಲ್ಲಿ ಕನ್ನಡವನ್ನು ದೊಡ್ಡ ಅಕ್ಷರಗಳಲ್ಲಿ ಹಾಗೂ ಪ್ರಧಾನವಾಗಿ ಬಳಸಬೇಕು. ಅನಂತರ ಬೇರೆ ಭಾಷೆಗಳನ್ನು ಕನ್ನಡಕ್ಕಿಂತ ಸಣ್ಣ ಪ್ರಮಾಣ ದಲ್ಲಿ ಬಳಸಬೇಕು' ಎಂದು ರಾಜ್ಯ ಸರಕಾರ ಕರ್ನಾಟಕ, "ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ನಿಯಮ-1963ರ ಸೆಕ್ಷನ್‌ 24(ಎ)'ಗೆ 2008ರಲ್ಲಿ ಮಾಡಿದ್ದ ತಿದ್ದುಪಡಿ ಆಧಾರದ ಮೇಲೆ ರೂಪಿಸಿದ್ದ ನಿಯಮವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಕನ್ನಡದಲ್ಲಿ ಕಡ್ಡಾಯವಾಗಿ ನಾಮಫ‌ಲಕ ಅಳವಡಿಸು ವಂತೆ ತನಗೆ ಹಿರಿಯ ಕಾರ್ಮಿಕ ಇನ್ಸ್‌ಪೆಕ್ಟರ್‌ ನೀಡಿದ್ದ ನೋಟಿಸ್‌ ಪ್ರಶ್ನಿಸಿ ವೊಡಾಫೋನ್‌ ಎಸ್ಸಾರ್‌ ಸೌತ್‌ ಲಿಮಿಟೆಡ್‌ ಸಂಸ್ಥೆ  ಅರ್ಜಿ ಸಲ್ಲಿಸಿತ್ತು.

ವಿಚಾರಣೆ ನಡೆಸಿದ ನ್ಯಾ| ಕೆ.ಎಲ್‌. ಮಂಜುನಾಥ್‌ ಮತ್ತು ನ್ಯಾ| ರವಿ ಮಳೀಮs… ಅವರ ವಿಭಾಗೀಯ ಪೀಠ, ವೊಡಾಪೋನ್‌ ಸಂಸ್ಥೆಗೆ ಕಾರ್ಮಿಕ ಇನ್ಸ್‌ಪೆಕ್ಟರ್‌ ನೀಡಿದ್ದ ನೋಟಿಸ್‌ ಜತೆಗೆ ರಾಜ್ಯದ ಎಲ್ಲ ವಾಣಿಜ್ಯ ಸಂಸ್ಥೆಗಳು ಕನ್ನಡದಲ್ಲಿ ನಾಮಫ‌ಲಕ ಅಳವಡಿಸಬೇಕು ಎಂದು ಸರಕಾರ ಜಾರಿ ಮಾಡಿದ್ದ ನಿಯಮವನ್ನೂ ರದ್ದುಪಡಿಸಿದೆ. ಅಲ್ಲದೆ, ವೊಡಾಫೋನ್‌ ಸಂಸ್ಥೆಗೆ ರಾಜ್ಯಾದ್ಯಂತ ಇಂಗ್ಲಿಷ್‌ನಲ್ಲೇ ನಾಮಫ‌ಲಕ ಹಾಕಿಕೊಳ್ಳುವುದಕ್ಕೆ ಅನುಮತಿ ನೀಡಿದೆ.

"ಹಿಂದೆ ಅನುಷ್ಠಾನಗೊಂಡ ಕಾಯ್ದೆಯಡಿ ಹೊಸ ದಾಗಿ ನಿಯಮ ರೂಪಿಸುವ ಹಕ್ಕು ರಾಜ್ಯ ಸರಕಾರ ಕ್ಕಿದೆ. ಕಾಯ್ದೆಯ ಪರಿಣಾಮಕಾರಿ ಜಾರಿ ಮತ್ತು ಅರ್ಥ ಮಾಡಿಸುವ ದೃಷ್ಟಿಯಿಂದ ನಿಯಮ ರೂಪಿಸಬಹುದು. ಆದರೆ, ನಿಯಮಗಳು ಕಾಯ್ದೆಯ ಗುರಿ ಹಾಗೂ ಧ್ಯೇಯೋದ್ದೇಶ ಗಳಿಗಿಂತ ಮೇಲಗೈ ಸಾಧಿಸುವುದಿಲ್ಲ' ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com