ಅಧ್ಯಾಪಕ ದಂಪತಿ ಮನೆಗೆ ದಾಳಿ: ಶಿಕ್ಷಕ ಸಂಘ ಖಂಡನೆ

ಕುಂದಾಪುರ: ಮೂಡುಗೋಪಾಡಿಯ ಅಧ್ಯಾಪಕ ದಂಪತಿಗಳಾದ ಪಿ. ನಾಗಪ್ಪಯ್ಯ ಹೆಬ್ಬಾರ್ ಮತ್ತು ನಿರ್ಮಲಾ ಹೆಬ್ಬಾರ್ ಅವರ ಮನೆ ಮೇಲೆ ಮದ್ಯ ಸಂಗ್ರಹಿಸಿಡಲಾಗಿದೆ ಎಂಬ ಸುಳ್ಳು ಮಾಹಿತಿ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಅಬಕಾರಿ ಮತ್ತು ಪೊಲೀಸರ ತಂಡ ಬುಧ ವಾರ ರಾತ್ರಿ ನಡೆಸಿರುವ ದಾಳಿಯನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಖಂಡಿಸಿದೆ. 

ಸಜ್ಜನ ಶಿಕ್ಷಕ ದಂಪತಿಯ ಮೇಲೆ ಮಾನಸಿಕ ದೌರ್ಜನ್ಯ ಎಸಗಲಾಗಿದೆ. ಬಾಗಿಲು ಬಡಿದು ಮನೆ, ತೋಟವನ್ನು ಬಲಾತ್ಕಾರವಾಗಿ ಶೋಧಿಸಲಾಗಿದೆ. ಅಬಕಾರಿ ದಾಳಿ ಸಂದರ್ಭ ಶಿಕ್ಷಕಿ ನಿರ್ಮಲಾ ತಡರಾತ್ರಿಯವರೆಗೂ ಮನೆಯಲ್ಲಿ ತನಗೆ ವಹಿಸಿದ್ದ ಬಿಎಲ್‌ಓ ಕರ್ತವ್ಯದ ತಯಾರಿ ನಡೆಸುತ್ತಿದ್ದರು. ಶಿಕ್ಷಕಿ ದಂಪತಿ ಈ ದಾಳಿಯಿಂದ ಮಾನಸಿಕ ಆಘಾತಕ್ಕೊಳಗಾಗಿದ್ದು ಸಮಾಜದಲ್ಲಿ ಮರ್ಯಾದೆಯಿಂದ ಬಾಳುತ್ತಿದ್ದ ನಮಗೆ ಆಗಿರುವ ಮಾನಹಾನಿ ತುಂಬಿಸಿಕೊಡುವವರು ಯಾರು ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಕೃತ್ಯ ಖಂಡನಾರ್ಹ. ಮುಂದೆ ಇಂತಹ ಪರಿಸ್ಥಿತಿ ಬರಬಾರದು ಎಂದು ಸಂಘದ ಅಧ್ಯಕ್ಷ ಮಲ್ಯಾಡಿ ಸದಾರಾಮ ಶೆಟ್ಟಿ ಮತ್ತು ಕಾರ್ಯದರ್ಶಿ ಹಳ್ನಾಡು ನಿತ್ಯಾನಂದ ಶೆಟ್ಟಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com