269 ಕೋ. ರೂ. ಅಕ್ರಮ ನಗದು ವಶ !

ಹೊಸದಿಲ್ಲಿ: ಚುನಾವಣಾ ಆಯೋಗ ನೇಮಿಸಿದ ತಂಡಗಳಿಂದ ಈ ತನಕ 269 ಕೋಟಿ ರೂ. ಅಕ್ರಮ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಗರಿಷ್ಠ ಮೊತ್ತದ ನಗದನ್ನು ವಶಪಡಿಸಿಕೊಳ್ಳಲಾದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಅಗ್ರ ಸ್ಥಾನದಲ್ಲಿದೆ.
    ಇಂದಿನ ವರೆಗೆ ಸಿದ್ಧಪಡಿಸಲಾಗಿರುವ ಅಧಿಕೃತ ಅಂಕಿ ಅಂಶಗಳ ಪ್ರಕಾರ ಚುನಾವಣಾ ಆಯೋಗವು ನೇಮಿಸಿರುವ ಚುನಾವಣಾ ಖರ್ಚು ವಿಚಕ್ಷಕ ದಳವು ಆಂಧ್ರಪ್ರದೇಶದಲ್ಲಿ 129 ಕೋಟಿ ರೂ., ಮಹಾರಾಷ್ಟ್ರದಲ್ಲಿ 33.46 ಕೋಟಿ ರೂ., ತಮಿಳುನಾಡಿನಲ್ಲಿ 19.87 ಕೋಟಿ ರೂ., ಕರ್ನಾಟಕದಲ್ಲಿ 12.29 ಕೋಟಿ ರೂ., ಉತ್ತರಪ್ರದೇಶದಲ್ಲಿ 12 ಕೋಟಿ ರೂ., ಮತ್ತು ಪಂಜಾಬ್‌ನಲ್ಲಿ 5 ಕೋಟಿ ರೂ. ಮೀರಿ ಅಕ್ರಮ ನಗದನ್ನು ವಶಪಡಿಸಿಕೊಂಡಿದೆ. ಇಷ್ಟು ಮಾತ್ರವಲ್ಲದೆ ಇನ್ನೂ ಅನೇಕ ರಾಜ್ಯಗಳಲ್ಲಿ ಸಣ್ಣ ಪುಟ್ಟ ಮೊತ್ತವನ್ನು ವಶಪಡಿಸಿಗೊಳ್ಳಲಾಗಿದೆ.
   ಇದೇ ವೇಳೆ 132 ಕೋಟಿ ಲೀಟರ್‌ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ. 104 ಕಿಲೋ ಹೆರಾಯಿನ್‌ ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಚುನಾವಣೆ ಅಕ್ರಮ ನಗದು, ಪ್ರಲೋಭನೆ, ಇತ್ಯಾದಿ ಕುರಿತಂತೆ 12,000 ಎಫ್ಐಆರ್‌ಗಳು ದಾಖಲಾಗಿವೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com