ಅಷ್ಟಪವಿತ್ರ ನಾಗಮಂಡಲೋತ್ಸವಕ್ಕೆ ಹೊರೆಕಾಣಿಕೆ

ಉಡುಪಿ: ಗುಂಡಿಬೈಲಿನ ನಾಗಬ್ರಹ್ಮ ಮಂಡಲ ಸೇವಾ ಸಮಿತಿ ಆಶ್ರಯದಲ್ಲಿ ಏ.14ರಿಂದ 19ರವರೆಗೆ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಪ್ರಯುಕ್ತ ಸೋಮವಾರ ಉಡುಪಿ ಜೋಡುಕಟ್ಟೆಯಿಂದ ಗುಂಡಿಬೈಲು ನಾಗಬ್ರಹ್ಮ ಸ್ಥಾನದವರೆಗೆ ವೈಭವದ ಹೊರೆಕಾಣಿಕೆ ಮೆರವಣಿಗೆ ನಡೆಯಿತು. 

ಜೋಡುಕಟ್ಟೆಯಿಂದ ಹೊರಟ ಮೆರವಣಿಗೆಗೆ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು. ಅನೇಕ ಧಾರ್ಮಿಕ ಸ್ತಬ್ಧ ಚಿತ್ರಗಳು, ಕೊಂಬು, ಕಹಳೆ, ಮಹಿಳಾ ಬಳಗದ ಚೆಂಡೆ, ಕೇರಳ ಚೆಂಡೆ, ವಾದ್ಯ, ನಾಸಿಕ್ ಬ್ಯಾಂಡ್ ವೇದಘೋಷಗಳ ಜತೆಗೆ ಮೆರವಣಿಗೆ ಕೆ.ಎಂ. ಮಾರ್ಗವಾಗಿ ನಾಗಬನದವರೆಗೆ ಸಾಗಿ ಬಂತು. 

ಮೆರವಣಿಗೆಯಲ್ಲಿ ನಾಗಮಂಡಲ ಸೇವಾ ಸಮಿತಿಯ ಪದಾಧಿಕಾರಿಗಳಾದ ಕೋಣಿ ವಾಸುದೇವ ಶೇಟ್, ಕೆ. ಗೋಕುಲ್‌ದಾಸ್ ಪೈ, ವಿದ್ಯಾವಂತ ಆಚಾರ್ಯ ಯು., ಕೆ. ಮೋಹನ್‌ದಾಸ್ ಕಿಣಿ, ಕೆ. ವಾಸುದೇವ ನಾಗೇಶ್ ಪೈ, ಕೆ. ನಾಗರಾಜ ಭಟ್, ಕೆ. ನಾಗರಾಜ ಪೈ, ರಮೇಶ್ ಶೆಣೈ ಹಾವಂಜೆ ಉಪಸ್ಥಿತರಿದ್ದರು. 

ಏ.19ರಂದು ರಾತ್ರಿ 10 ಗಂಟೆಗೆ ಅಷ್ಟ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಮಧ್ಯಾಹ್ನ 12.30ರಿಂದ ಮಹಾ ಅನ್ನಸಂತರ್ಪಣೆ ನಡೆಯಲಿದ್ದು, ಸಂಜೆ 7 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com