ಸರಣಿ ರಜೆ: ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಭಾರೀ ಸಂಖ್ಯೆಯ ಭಕ್ತರು

ಕೊಲ್ಲೂರು : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಎ. 18ರಂದು ದಾಖಲೆಯ ಭಕ್ತರು ಆಗಮಿಸಿದ್ದು, ದೇವಳದಿಂದ ಶ್ರೀ ಮೂಕಾಂಬಿಕಾ ಸಭಾಭವನದ ತನಕ ಬೆಳಗಿನ ಜಾವದಿಂದ ಮಧ್ಯಾಹ್ನದ ತನಕ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ತಮ್ಮ ಸರದಿಗಾಗಿ ಕಾಯುತ್ತಿರುವುದು ಕಂಡುಬಂತು.

ಮತದಾನದ ಅನಂತರ ಉಳಿದೆರೆಡು ರಜಾದಿನಗಳಾದ ಕಾರಣ ಕೇರಳ, ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕದ ನಾನಾ ಭಾಗಗಳಿಂದ ಸುಮಾರು 10,000ಕ್ಕೂ ಮಿಕ್ಕಿ ಭಕ್ತರು ಕೊಲ್ಲೂರು ದೇವಿಯ ದರ್ಶನಕ್ಕೆ ಆಗಮಿಸಿದ್ದಾರೆ.

ಶುಕ್ರವಾರ ನೆರೆದ ಅಷ್ಟೊಂದು ಭಕ್ತರು ದೇವಿಯ ದರ್ಶನ ಪಡೆಯಲು ಪಾಡುಪಡಬೇಕಾಯಿತು. ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅವರು ಸಿಬಂದಿಗಳ ಸಹಕಾರದಿಂದ ಭಕ್ತರಿಗೆ ಅನಾಯಾಸವಾಗಿ ದೇವರ ದರ್ಶನವಾಗುವಂತೆ ಅನುಕೂಲ ಕಲ್ಪಿಸಿದರು. ಉರಿಬಿಸಿಲ ಬೇಗೆ ತಡೆಯಲು ನೆರಳಿಗಾಗಿ ದೇವಳದ ಹೊರ ಪೌಳಿಯಲ್ಲಿ ಚಪ್ಪರ ನಿರ್ಮಿಸಿರುವುದು ಭಕ್ತರಿಗೆ ಅನುಕೂಲವಾಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com