ಸೋನಿಯಾ ನಾಮಪತ್ರ ಸಲ್ಲಿಕೆ

ರಾಯ್‌ಬರೇಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಂದು ಮಧ್ಯ ಉತ್ತರ ಪ್ರದೇಶದ ತಮ್ಮ ಭದ್ರಕೋಟೆ ಎನಿಸಿರುವ ರಾಯ್‌ಬರೇಲಿ ಕ್ಷೇತ್ರದಿಂದ 16ನೇ ಲೋಕಸಭೆಗೆ ಸ್ಪರ್ಧಿಸಲು ಹೋಮ - ಹವನ ಕೈಗೊಂಡ ಬಳಿಕ ನಾಮಪತ್ರ ಸಲ್ಲಿಸಿದರು.

67 ವರ್ಷ ಪ್ರಾಯದ ಸೋನಿಯಾ ಅವರು ಪುತ್ರ ರಾಹುಲ್‌ ಗಾಂಧಿ ಜತೆಗೂಡಿ ಜಿಲ್ಲಾ ಚುನಾವಣಾಧಿಕಾರಿ ಆದಿತಿ ಸಿಂಗ್‌ ಅವರಿಗೆ ತಮ್ಮ ನಾಮಪತ್ರಗಳ 3 ಸೆಟ್‌ಗಳನ್ನು ಸಲ್ಲಿಸಿದರು. ಸೋನಿಯಾ ಅವರು ಈ ಹಿಂದೆ ರಾಯ್‌ಬರೇಲಿ ಕ್ಷೇತ್ರದಿಂದ ಒಂದು ಉಪಚುನಾವಣೆ ಸೇರಿದಂತೆ 3 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಸೋನಿಯಾ ಅವರು ತಮ್ಮ ನಾಮಪತ್ರ ಸಲ್ಲಿಸುವಾಗ ಅವರ ಜತೆಗೆ ಅವರ ಕುಟುಂಬದ ಹಳೇ ನಿಷ್ಠಾವಂತರಾದ ಸತೀಶ್‌ ಶರ್ಮಾ ಮತ್ತು ತಮ್ಮ ಪ್ರತಿನಿಧಿ ಕೆ ಎಲ್‌ ಶರ್ಮಾ ಇದ್ದರು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಉಮಾ ಶಂಕರ್‌ ಸಿಂಗ್‌, ಅಶೋಕ್‌ ಕುಮಾರ್‌ ಸಿಂಗ್‌ (ಮಾಜಿ ಶಾಸಕ) ಮತ್ತು ರಾಜಾರಾಮ್‌ ತ್ಯಾಗಿ (ಮಾಜಿ ಶಾಸಕ) ಅವರು ಸೋನಿಯಾ ಅವರ ನಾಮಪತ್ರಕ್ಕೆ ಅನುಮೋದಕರಾಗಿ ಜತೆಗಿದ್ದರು. 
ಉದಯವಾಣಿ ಕೃಪೆ


ನಾಮಪತ್ರ ಸಲ್ಲಿಸಲು ಹೋಗುವ ಮುನ್ನ ಸೋನಿಯಾ ಅವರು ಸ್ಥಳೀಯ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಹೋಮ - ಹವನ ಕೈಗೊಂಡರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com