ಸಾಲನ್ನ ಬಿಟ್ಟು ಮುನ್ನುಗ್ಗಿ ಮತದಾನಕ್ಕೆ ಯತ್ನಿಸಿದ ಚಿರಂಜೀವಿ, ಮತದಾರನಿಂದ ಛೀಮಾರಿ

ಹೈದ್ರಾಬಾದ್: ನೆಪಮಾತ್ರಕ್ಕೆ ಸರದಿ ಸಾಲಿಗೆ ಬರುವ ಸೆಲೆಬ್ರಿಟಿಗಳು ಬಳಿಕ ಸಾಲನ್ನ ಜಂಪ್ ಮಾಡುವುದೇ ಹೆಚ್ಚು. ಇದೀಗ, ಹೈದ್ರಾಬಾದ್`ನ ಜ್ಯುಬಿಲಿ ಹಿಲ್ಸ್`ನಲ್ಲಿ ನಡೆಯುತ್ತಿರುವ ಮತದಾನದ ವೇಳೆಯೂ ಇಂತಹದ್ದೊಂದು ಘಟನೆ ನಡೆದಿದೆ. ಕಾಂಗ್ರೆಸ್ ಮುಖಂಡ ಕೇಂದ್ರ ಸಚಿವ ಮೆಗಾಸ್ಟಾರ್ ಚಿರಂಜೀವಿ ನೆಪ ಮಾತ್ರಕ್ಕೆ ಸರದಿ ಸಾಲಿನಲ್ಲಿ ನಿಂತು ಬಳಿಕ ಸಾಲನ್ನ ಜಂಪ್ ಮಾಡಿ ಮತದಾನಕ್ಕೆ ಯತ್ನಿಸಿದ ಘಟನೆ ನಡೆದಿದೆ. 

ಚಿರಂಜೀವಿ ಸಾಲನ್ನ ಬಿಟ್ಟು ಮುಂದಕ್ಕೆ ಹೋಗುತ್ತಿದ್ದಂತೆ ಮತದಾರನೊಬ್ಬ ಸಾಲಿನಲ್ಲಿ ಬರಬೇಕೆಂಬುದು ನಿಮಗೆ ಗೊತ್ತಿಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ತೀವ್ರ ಮುಜುಗರಕ್ಕೀಡಾದ ಚಿರು, ಮತದಾರನ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಆದರೆ, ತನ್ನ ನಿಲುವಿಗೆ ಬದ್ಧನಾಗಿದ್ದ ಮತದಾರ ಚಿರು ಮಾತನ್ನ ಕೇಳಲಿಲ್ಲ. ಈ ಸಂದರ್ಭ ಯಾವೊಬ್ಬ ಮತಗಟ್ಟೆ ಸಿಬ್ಬಂದಿಯೂ ಚಿರು ನೆರವಿಗೆ ಬರಲಿಲ್ಲ. ಮುಖ ಪೆಚ್ಚು ಹಾಕಿಕೊಂಡ ಚಿರಂಜೀವಿ ವಿಧಿ ಇಲ್ಲದೇ ಸಾಲಿನಲ್ಲಿ ಬಂದು ಮತದಾನ ಮಾಡಿದರು.

ಘಟನೆ ಬಳಿಕ ಏನೂ ಆಗದಂತೆ ಇರಲು ಚಿರಂಜೀವಿ ಯತ್ನಿಸುತ್ತಿದ್ದರು. ಆದರೆ, ಅವರು ಮತ್ತವರ ಕುಟುಂಬ ಸದಸ್ಯರ ಮುಖದಲ್ಲಿ ಕೋಪ್ ಮತ್ತು ಅಸಮಾಧಾನ ೆದ್ದು ಕಾಣುತ್ತಿತ್ತು.ಯ ಹಿಂದಿನ ಒಂದು ರಹಸ್ಯ..!
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com