ಮೇ 6: ಮಂತ್ರಾಲಯ ಶ್ರೀಗಳಿಂದ ಉಡುಪಿ ಭೇಟಿ

ಉಡುಪಿ: ಮಂತ್ರಾಲಯದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದರು ಮೊದಲ ಬಾರಿಗೆ ಶ್ರೀಕೃಷ್ಣನ ದರ್ಶನಾನುಗ್ರಹಕ್ಕಾಗಿ ಉಡುಪಿಗೆ ಮೇ 6 ರಂದು ಭೇಟಿ ನೀಡಲಿದ್ದಾರೆ ಎಂದು ಪರ್ಯಾಯ ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ತಿಳಿಸಿದ್ದಾರೆ. 

 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4 ಗಂಟೆಗೆ ಜೋಡುಕಟ್ಟೆಯಿಂದ ಅದ್ಧೂರಿಯ, ಸಾಂಪ್ರದಾಯಿಕ ಮೆರವಣಿಗೆ ಮೂಲಕ, ಸಕಲ ಗೌರವಗಳೊಂದಿಗೆ ಪಟ್ಟದ ದೇವರನ್ನು ಮುಂದಿಟ್ಟು ರಥಬೀದಿಗೆ ಕರೆತರಲಾಗುವುದು ಎಂದರು. 

ಶ್ರೀಕೃಷ್ಣನ ದರ್ಶನದ ಬಳಿಕ ಮಂತ್ರಾಲಯ ಶ್ರೀಪಾದರಿಗೆ ಸಂಜೆ 6ಕ್ಕೆ ರಾಜಾಂಗಣದಲ್ಲಿ ಯತಿಗಳಿಂದ ಗೌರವ, ಪೌರ ಸನ್ಮಾನವಿದೆ. ಮೇ 7 ರಂದು ಮಂತ್ರಾಲಯ ಶ್ರೀಪಾದರು ಶ್ರೀಕೃಷ್ಣಮಠದಲ್ಲಿ ತಮ್ಮ ಸಂಸ್ಥಾನ ಪೂಜೆ ನೆರವೇರಿಸುವರು. 

ಮೇ 7, 8ರ ಸಂಜೆ 4.30ಕ್ಕೆ ರಾಜಾಂಗಣದಲ್ಲಿ ವಿದ್ವಾಂಸರಿಗೆ ಸನ್ಮಾನ, ಚರ್ಚಾ ಗೋಷ್ಠಿ ನಡೆಯಲಿದೆ. ಮೇ 8ರಂದು ಸಂಜೆ 6 ಕ್ಕೆ ರಥಬೀದಿಯಲ್ಲಿರುವ ಶ್ರೀರಾಘವೇಂದ್ರ ಮಠದಲ್ಲಿ ವಸಂತ ಪೂಜೆ ನೆರವೇರಿಸುವರು ಎಂದರು. 

ಸುದ್ದಿಗೋಷ್ಠಿಯಲ್ಲಿ ಶ್ರೀಕಾಂತ ಉಪಾಧ್ಯ, ನಾಗರಾಜ ಉಪಾಧ್ಯ, ಜಯತೀರ್ಥ ಆಚಾರ್ಯ, ನರಸಿಂಹ ಉಪಾಧ್ಯ ಉಪಸ್ಥಿತರಿದ್ದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com