ಶಿಶು ಮಂದಿರ ಪುಟಾಣಿಗಳ ಸಾಮೂಹಿಕ ಹುಟ್ಟುಹಬ್ಬ

ಉಪ್ಪುಂದ : ಉಪ್ಪುಂದ ಮೂಡುಗಣಪತಿ ಸೇವಾ ಸಂಗಮ ಶಿಶು ಮಂದಿರ, ಗ್ರಾಮ ವಿಕಾಸ ಸಮಿತಿ ಉಪ್ಪುಂದ ಆಶ್ರಯದಲ್ಲಿ ಶಿಶು ಮಂದಿರದಲ್ಲಿ ಕಲಿಯುತ್ತಿರುವ 6 ವರ್ಷದೊಳಗಿನ ಮುದ್ದು ಪುಟಾಣಿಗಳ ಸಾಮೂಹಿಕ ಹುಟ್ಟುಹಬ್ಬ ಕಾರ್ಯಕ್ರಮ ಸ್ಥಳೀಯ ಶಂಕರ ಕಲಾ ಮಂದಿರದಲ್ಲಿ ಜರುಗಿತು. 

ಉಪ್ಪುಂದ ಗ್ರಾಮ ವಿಕಾಸ ಸಮಿತಿ ಸಲಹೆಗಾರ ಮೋಹನಚಂದ್ರ ಉಪ್ಪುಂದ ಮಾತನಾಡಿ, ಮನೆ ಮನೆಗಳು ಸಂಸ್ಕಾರದ ಕೇಂದ್ರವಾಗಬೇಕು. ಉತ್ತಮ ಬೀಜದಿಂದ ಉತ್ತಮ ಫಸಲು ಬರುವಂತೆ ತಾಯಿಯ ಮಡಿಲಲ್ಲಿ ಹೆಚ್ಚು ಕಾಲ ವಿಶ್ರಮಿಸುವ ಪುಟಾಣಿಗಳಿಗೆ ಕ್ಷಣ ಕ್ಷಣಕ್ಕೂ ಮಾತೃ ಭಾಷೆಯಲ್ಲಿ ದೇಶಾಭಿಮಾನ ಮೂಡಿಸುವ ವಿಚಾರಧಾರೆ ಎರೆದರೆ ಉತ್ತಮ ಮನೋಧರ್ಮವುಳ್ಳ ಸಾತ್ವಿಕ ಗುಣ ನಡತೆಯ ವಿದ್ಯಾರ್ಥಿಯಾಗಿ ಮೂಡಿ ಬರುವ ಸಾಧ್ಯತೆ ಇದೆ ಎಂದರು. 

ಶಿಶು ಮಂದಿರದ ವ್ಯವಸ್ಥಾಪಕ ಯು. ಕೇಶವ ಪ್ರಭು ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಗಣೇಶ ಪಡಿಯಾರ್ ಉಪ್ಪುಂದ, ಶಿಶು ಮಂದಿರದ ಅಧ್ಯಕ್ಷ ಬಿ.ಎ. ಮಂಜು ದೇವಾಡಿಗ ಉಪಸ್ಥಿತರಿದ್ದರು. ಗ್ರಾಮ ವಿಕಾಸ ಸಮಿತಿ ಕಾರ‌್ಯದರ್ಶಿ ಪ್ರಸನ್ನ ಕುಮಾರ ಸ್ವಾಗತಿಸಿದರು. ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಮಹಾಬಲೇಶ್ವರ ಐತಾಳ ಪ್ರಾಸ್ತಾವಿಕ ಮಾತನಾಡಿದರು. ಶಿಶುಮಂದಿರದ ಕಾರ‌್ಯದರ್ಶಿ ಲಿಂಗಯ್ಯ ಉಪ್ಪುಂದ ಕಾರ‌್ಯಕ್ರಮ ನಿರ್ವಹಿಸಿದರು. ರಾಮಕೃಷ್ಣ ದೇವಾಡಿಗ ಪರಿಚಯಿಸಿದರು. ಸುಧಾಕರ ದೇವಾಡಿಗ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com