ತಮಿಳುನಾಡು ಸಂಸದ ಕುಂದಾಪುರ ವೆಂಕಟರಮಣ ದೇವಳಕ್ಕೆ ಭೇಟಿ

ಕುಂದಾಪುರ: ತಮಿಳುನಾಡು ಸಂಸದ, ಡಿಎಂಕೆ ನಾಯಕ ಇ.ಜಿ. ಸುಗುವನಂ ಸೋಮವಾರ ರಾತ್ರಿ 8 ಗಂಟೆಗೆ ಇಲ್ಲಿನ ಪೇಟೆ ಶ್ರಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. 
      ಪತ್ನಿ ಹಂಸವೇಣಿ, ಪುತ್ರಿ ಅಂಜುಗಂ, ಪುತ್ರ ಸೂರ್ಯನ್ ಅವರೊಂದಿಗೆ ಆಗಮಿಸಿದ್ದ ಅವರು ವಿಶೇಷ ಪೂಜೆ ಸಲ್ಲಿಸಿದರು. ದೇವಳದ ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ಬರಮಾಡಿಕೊಂಡರು. 
     ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೃತೀಯ ರಂಗವನ್ನು ಬೆಂಬಲಿಸುವ ಕುರಿತಾಗಿ ಈ ವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಪ್ರಧಾನಿಯಾಗಬೇಕೆಂದು ಕನಸು ಕಾಣುತ್ತಿರುವ ಜಯಲಲಿತಾ ಅವರ ಪ್ರಯತ್ನ ಕೈಗೂಡುವುದಿಲ್ಲ. ಡಿಎಂಕೆ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು. 
   ಪೇಟೆ ವೆಂಕಟರಮಣ ದೇವಸ್ಥಾನದ ಮಹಿಮೆ ಅರಿತಿದ್ದೇನೆ. ದೇವರ ದರ್ಶನ ಪಡೆದು ಮನಸ್ಸಿಗೆ ಖುಷಿಯಾಗಿದೆ. ಕೊಲ್ಲೂರು, ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಲು ಆಗಮಿಸಿರುವುದಾಗಿ ಅವರು ಹೇಳಿದರು. 
     ಡಿಎಂಕೆ ಮುಖ್ಯಸ್ಥ ಕರುಣಾನಿಧಿಯವರ ಪುತ್ರ ಸ್ಟಾಲಿನ್ ಅವರ ನಿಕಟವರ್ತಿ ಎನಿಸಿಕೊಂಡಿರುವ ಸುಗುವನಂ ಎರಡು ಬಾರಿ ಸಂಸದ, 1 ಬಾರಿ ಎಂಎಲ್‌ಎ ಆದವರು. ಕೃಷ್ಣಗಿರಿ ಕ್ಷೇತ್ರದ ಹಾಲಿ ಸಂಸದರಾಗಿರುವ ಇವರು ಮಗದೊಮ್ಮೆ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com