ಇಂಟರ್ನೆಟ್‌ನಲ್ಲಿ ಹಾರ್ಟ್‌ಬ್ಲೀಡ್‌ ಬಗ್‌ ಹಾವಳಿ

ನ್ಯೂಯಾರ್ಕ್‌: ಅಂತರ್ಜಾಲದ ಮೂಲಕ ಪ್ರಸರಣವಾಗುವ ಮಾಹಿತಿಯನ್ನು ಹ್ಯಾಕರ್‌ಗಳಿಂದ ರಕ್ಷಿಸಲು ಏನೆಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದರೂ, ಹಾರ್ಟ್‌ಬ್ಲೀಡ್‌ ಎಂಬ ಬಗ್‌ (ಸಮಸ್ಯೆ) ಒಂದು ಕಳೆದ 2 ವರ್ಷದಿಂದ ವಿಶ್ವದಾದ್ಯಂತ ಕೋಟ್ಯಂತರ ಜನರ ವೈಯಕ್ತಿಕ ಮಾಹಿತಿಯನ್ನು ಅಪಾಯಕ್ಕೆ ಒಡ್ಡಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 

ಯಾಹೂ, ಗೂಗಲ್‌, ಅಮೇಜಾನ್‌ ಸೇರಿದಂತೆ ವಿಶ್ವದಾದ್ಯಂತ ಇರುವ ಶೇ.70ರಷ್ಟು ಸಂಸ್ಥೆಗಳು ಈ ಬಗ್‌ ದಾಳಿಗೆ ಒಳಗಾಗಿರುವ ಭೀತಿ ಎದುರಾಗಿದ್ದು, ಈ ವಿಷಯ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಇನ್ನೂ ಆತಂಕದ ವಿಷಯವೆಂದರೆ, ಅಂತರ್ಜಾಲದಲ್ಲಿ ಮಾಹಿತಿ ಕಳ್ಳತನವನ್ನು ರಕ್ಷಿಸಲು ಇರುವ 'ಓಪನ್‌ ಎಸ್‌ಎಸ್‌ಎಲ್‌' ವ್ಯವಸ್ಥೆಯಲ್ಲೇ ಈ ಬಗ್‌ (ದೋಷ) ಕಂಡುಬಂದಿದೆ. 

ಹೀಗಾಗಿ ಕೋಟ್ಯಂತರ ಜನರ ಇ ಮೇಲ್‌, ಕ್ರೆಡಿಟ್‌ ಕಾರ್ಡ್‌, ಕಂಪನಿಗಳ ರಹಸ್ಯ ಮಾಹಿತಿ ಸೇರಿದಂತೆ ಭಾರೀ ಪ್ರಮಾಣದ ಮಾಹಿತಿ 2 ವರ್ಷಗಳಿಂದ ಕಳ್ಳಕಾಕರ ಕೈಗೆ ಸುಲಭವಾಗಿ ಲಭ್ಯವಿತ್ತು ಎಂಬ ಆತಂಕದ ವಿಷಯ ಬೆಳಕಿಗೆ ಬಂದಿದೆ. 

ಹೀಗಾಗಿ ಆನ್‌ಲೈನ್‌ ಮೂಲಕ ನಂಟು ಹೊಂದಿರುವ, ಆನ್‌ಲೈನ್‌ನಲ್ಲಿ ಸೇವೆ ಒದಗಿಸುತ್ತಿರುವ ಜಗತ್ತಿನ ಪ್ರಮುಖ ಕಂಪನಿಗಳೆಲ್ಲಾ ಈ ಸಮಸ್ಯೆಯಿಂದ ಪಾರಾಗಲು ಭಾರೀ ಪ್ರಮಾಣದ ಯತ್ನ ಆರಂಭಿಸಿವೆ. ಈ ಮಧ್ಯೆ ಗೂಗಲ್‌, ಫೇಸ್‌ಬುಕ್‌, ಟ್ಟಿàಟರ್‌ ತಮ್ಮ ಸರ್ವರ್‌ಗಳು ಈ ಬಗ್‌ಗೆ ಬಲಿಯಾಗಿಲ್ಲ. ಜನರು ಜೀಮೇಲ್‌, ಫೇಸ್‌ಬುಕ್‌ ಬಳಸಬಹುದು ಎಂದಿದೆ. ಹಾಗೆಯೇ ಸುರಕ್ಷಿತ ಪಾಸ್‌ವರ್ಡ್‌ ಬಳಸುವಂತೆಯೂ ಸೂಚಿಸಿದೆ. 

ಏನಿದು ಹಾರ್ಟ್‌ಬ್ಲೀಡ್‌? 

ಹಾರ್ಟ್‌ಬ್ಲೀಡ್‌ ಎನ್ನುವುದು ಎಸ್‌ಎಸ್‌ಎಲ್‌ ವ್ಯವಸ್ಥೆಯಲ್ಲಿ ಸಂವಹನದ ಒಂದು ಭಾಗ. ಯಾವುದೇ ವ್ಯಕ್ತಿ ಅಂತರ್ಜಾಲದ ಮೂಲಕ ಮತ್ತೂಂದು ವ್ಯಕ್ತಿಗೆ ಮಾಹಿತಿ ರವಾನಿಸಲು ಮುಂದಾದಾಗ ಅಥವಾ ಪಡೆಯಲು ಉದ್ದೇಶಿಸಿದಾಗ, ಎಸ್‌ಎಸ್‌ಎಲ್‌ ವ್ಯವಸ್ಥೆಯು ಒಂದು ಕಂಪ್ಯೂಟರ್‌ನಿಂದ ಮತ್ತೂಂದು ಕಂಪ್ಯೂಟರ್‌ನ ಸರ್ವರ್‌ಗೆ ಗುಪ್ತ ಸಂದೇಶ ರವಾನಿಸಿ, ಅಲ್ಲಿಂದ ಮಾಹಿತಿ ಪಡೆಯುತ್ತದೆ. ಆದರೆ ಈ ವ್ಯವಸ್ಥೆಯಲ್ಲಿಯೇ ಇದೀಗ ದೋಷ ಕಾಣಿಸಿಕೊಂಡಿದೆ. ಅಂದರೆ ಹಾರ್ಟ್‌ಬ್ಲೀಡ್‌ ಸಂದೇಶವನ್ನು ಹ್ಯಾಕ್‌ ಮಾಡಿ, ಎಸ್‌ಎಸ್‌ಎಲ್‌ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವ ವಿಶ್ವದ ಯಾವುದೇ ವೆಬ್‌ಸೈಟ್‌ ಅಥವಾ ಅದರ ಸರ್ವರ್‌ನಿಂದ ಮಾಹಿತಿ ಕದಿಯಬಹುದಾಗಿದೆ. 

ಓಪನ್‌ ಎಸ್‌ಎಸ್‌ಎಲ್‌? 

ಓಪನ್‌ ಎಸ್‌ಎಸ್‌ಎಲ್‌ ಎನ್ನುವುದು ಉಚಿತವಾಗಿ ಲಭ್ಯವಿರುವ ಎನ್‌ಕ್ರಿಪ್ಷನ್‌ ಟೆಕ್ನಾಲಜಿ (ಕಂಪ್ಯೂಟರ್‌ನಲ್ಲಿ ಮಾಹಿತಿ ಪ್ರಸರಣ ಮಾಡುವಾಗ ಅದನ್ನು ಗೂಢಲಿಪಿಯಲ್ಲಿ ರವಾನಿಸುವ ಮೂಲಕ ಯಾರಿಗೆ ಮಾಹಿತಿ ಸಿಗಬೇಕೋ ಅವರಿಗೆ ಮಾತ್ರವೇ ಮಾಹಿತಿ ಸಿಗುವಂತೆ ಮಾಡುವ ವ್ಯವಸ್ಥೆ). 

ಪ್ರತಿ ಬಾರಿ ನಾವು ಅಂತರ್ಜಾಲದಲ್ಲಿ ಯಾವುದೇ ವೆಬ್‌ಸೈಟ್‌ ಓಪನ್‌ ಮಾಡಿದಾಗ ಯುಆರ್‌ಎಲ್‌ ಬಾರ್‌ನಲ್ಲಿ ಚಿಕ್ಕ ಬೀಗದ ಚಿತ್ರ ಕಾಣಿಸುತ್ತದೆ. ಈ ಚಿತ್ರವು, ವೆಬ್‌ಸೈಟ್‌ ಎನ್‌ಕ್ರಿಪ್ಷನ್‌ ಟೆಕ್ನಾಲಜಿ ಬಳಸುತ್ತಿದೆ ಎಂಬುದರ ಸೂಚಕ. ಬಹುತೇಕ ವೆಬ್‌ಸೈಟ್‌ಗಳು ಓಪನ್‌ ಎಸ್‌ಎಸ್‌ಎಲ್‌ ಬಳಸುತ್ತಿವೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com