ಪ್ರಧಾನಿ ಸಿಂಗ್‌ ಮಲಸಹೋದರ ಬಿಜೆಪಿ ಸೇರ್ಪಡೆ

ಅಮೃತಸರ: ದೇಶದಲ್ಲಿ ಮೋದಿ ಅಲೆ ಎಂಬುದೇ ಇಲ್ಲ; ಅದೇನಿದ್ದರೂ ಮಾಧ್ಯಮಗಳು ಸೃಷ್ಟಿಸಿರುವ ಅಲೆ ಎಂದು ಹೇಳಿಕೆ ನೀಡಿದ ಒಂದು ದಿನದ ತರುವಾಯ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಮಲ ಸಹೋದರ ದಲ್‌ಜೀತ್‌ ಸಿಂಗ್‌ ಕೊಹ್ಲಿ ಅವರು ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ. 
ಈ ಘಟನೆಯಿಂದ ಸ್ವತಃ ಮನಮೋಹನ್‌ ಸಿಂಗ್‌ ಅವರಿಗೆ ಹಾಗೂ ಕಾಂಗ್ರೆಸ್‌ ಪಕ್ಷಕ್ಕೆ ಭಾರೀ ಆಘಾತ, ಮುಖಭಂಗ ಉಂಟಾಗಿದೆ.

ಕೊಹ್ಲಿ ಅವರು ಅಮೃತಸರದಲ್ಲಿನ ಓರ್ವ ಉದ್ಯಮಿ. ಅಮೃತಸರ ಕ್ಷೇತ್ರದ ಅಭ್ಯರ್ಥಿಯಾಗಿರುವ ಬಿಜೆಪಿ ಹಿರಿಯ ನಾಯಕ ಅರಣ್‌ ಜೇತ್ಲಿ ಅವರ ಚುನಾವಣಾ ಪ್ರಚಾರಾರ್ಥ ನರೇಂದ್ರ ಮೋದಿ ಅವರು ಅಮೃತಸರಕ್ಕೆ ಬಂದಿದ್ದ ಸಂದರ್ಭದಲ್ಲಿ ಕೊಹ್ಲಿ ಅವರು ಮೋದಿ ಅವರ ಉಪಸ್ಥಿತಿಯಲ್ಲಿ ಬಿಜೆಪಿಯನ್ನು ವಿಧ್ಯುಕ್ತವಾಗಿ ಸೇರಿಕೊಂಡರು. 

ಮೋದಿ ಅವರ ಸಾರ್ವಜನಿಕ ಸಮಾವೇಶದಲ್ಲಿ ಕೊಹ್ಲಿ ಅವರು ಮೋದಿ ಹಾಗೂ ಇನ್ನಿತರ ಹಿರಿಯ ಬಿಜೆಪಿ ನಾಯಕರು ಮತ್ತು ಶಿರೋಮಣಿ ಅಕಾಲಿ ದಳದ ನಾಯಕರೊಂದಿಗೆ ವೇದಿಕೆಯನ್ನು ಹಂಚಿಕೊಂಡರು. 

photo: indiatoday
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com