ನವೀನ್‌ಚಂದ್ರ ಉಪ್ಪುಂದ ರಾಜಕೀಯ ನಿವೃತ್ತಿ ಘೋಷಣೆ

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಮದ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸಂಘ ಪರಿವಾರ ಮತ್ತು ಬಿಜೆಪಿ ಯಲ್ಲಿ ಜಾತಿಯ ಆಧಾರದಲ್ಲಿ ಮಣೆ ಹಾಕುವ ಪ್ರವೃತ್ತಿ ದೊಡ್ಡ ಸಮುದಾಯಗಳ ಓಲೈಕೆಗಾಗಿ ಸಣ್ಣ ಸಮುದಾಯವನ್ನು ಬಲಿ ಕೊಡುವ ಕಾರ್ಯ ನಡೆಯುತ್ತಿರುವುದರಿಂದ ಸಂಘ ಪರಿವಾರ ಮತ್ತು ಬಿಜೆಪಿಯ ಸಂಪರ್ಕದಿಂದ ದೂರವಿದ್ದು, ರಾಜಕೀಯ ನಿವೃತ್ತಿಯನ್ನು ಘೋಷಿಸುತ್ತೇನೆ ಎಂದು ಆರ್‌.ಎಸ್‌.ಉಡುಪಿ ಜಿಲ್ಲಾ ಕಾರ್ಯಕಾರಣೆ ಮಾಜಿ ಸದಸ್ಯ, ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ತಿಳಿಸಿದ್ದಾರೆ.

ಅವರು ಕುಂದಾಪುರ ಪ್ರಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸುತ್ತಾ, ಹಿಂದೂ ಸಂಘಟನೆ, ಬಿಜೆಪಿಯಲ್ಲಿ ಜಾತಿ, ಹಣ ಅಂತಸ್ತುಗಳಿಗೆ ಬೆಲೆ, ಪ್ರಾಮಾಣಿಕ ಕಾರ್ಯಕರ್ತರಿಗೆ ಹಾಗೂ ಅವರ ಮಾತಿಗೆ ಬೆಲೆ ಇಲ್ಲದೇ ಇರುವುದರಿಂದ 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಕಾಂಗ್ರೇಸ್‌ನಿಂದ ಆಗ ತಾನೆ ವಲಸೆ ಬಂದವರನ್ನು ಬೈಂದೂರು ಕ್ಷೇತ್ರದ ಟಿಕೇಟ್‌ ನೀಡಿರುವುದನ್ನು ವಿರೋಧಿಸಿ ಕಾರ್ಯಕರ್ತರ ಒತ್ತಾಸೆಗೆ ಮಣಿದು ಕೆಜೆಪಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆನು. ಹಾಗೂ ಇದರ ಫಲಿತಾಂಶದಿಮದ ಪಕ್ಷ ಮತ್ತು ಸಮಘಟನೆ ಪಾಠ ಕಲಿಯುವಂತೆ ಕಾರ್ಯಕರ್ತರು ಮಾಡಿ ತೋರಿಸಿದ್ದಾರೆ. ಸಾಮಾಜಿಕ ನ್ಯಾಯವನ್ನು ಮರೆತು ಕಾರ್ಯಾಚರಿಸುವ ಸಮಘ ಮತ್ತು ವಿವಿಧ ಕ್ಷೇತ್ರಗಳ 20 ವರ್ಷಗಳ ಸಂಬಂಧವನ್ನು ಕಡಿದುಕೊಂಡು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸೇರದೇ ವ್ಯಯಕ್ತಿಕ ನೆಲೆಯಲ್ಲಿ ಸಮಾಜದ ಕೆಲಸಗಳನ್ನು ಮಾಡುವ ಗುರಿಹೊಂದಿದ್ದೇನೆ ಎಂದರು. ರಾಜಕೀಯ ಪಕ್ಷಗಳ ತಾಳಕ್ಕೆ ಕುಣಿಯದೇ ಯಾವುದೋ ಗುತ್ತುಗುರಿ ಇಲ್ಲದ ಸಿದ್ಧಾಂತಕ್ಕೆ ತಿಲಾಂಜಲಿ ಇಡುವ ಸಂಘ ಸಂಸ್ಥೆಗಳ ಜೊತೆಗೆ ಗುರುತಿಸಿಕೊಳ್ಳದೇ ಪ್ರಮಾಟಣಿಕವಾಗಿ ದುಡಿದು ಅದರಲ್ಲಿ ವ್ಯಯಕ್ತಿಕ ನೆಲೆಯಲ್ಲಿ ತಮ್ಮ ಗ್ರಾಮದಲ್ಲಿ ಸೇವಾರೂಪದಲ್ಲಿ ಸಮಾಜದ ಕಾರ್ಯಕ್ಕೆ ಸ್ವಲ್ಪ ಸಮಯ ವಿನಿಯೋಗಿಸಿ ಸಮಾಜ ಋಣವನ್ನು ತೀರಿಸಿಕೊಳ್ಳಿ ಎಂದು ಅವರು ಉಡುಪಿ ಜಿಲ್ಲೆಯ ಸಣ್ಣ ಸಣ್ಣ ಸಮುದಾಯದ ಜನತೆಯಲ್ಲಿ ವಿನಂತಿಸಿಕೊಂಡಿದ್ದಾರಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com