ಸಮುದಾಯದ ಏಳ್ಗೆಗೆ ಒಗ್ಗೂಡಿದ ದುಡಿಮೆ ಅಗತ್ಯ-ಸುರೇಶ ಆರ್.ಕಾಂಚನ್

ಬಗ್ವಾಡಿ: ಸಂಘಟನೆಗಳು ಶಕ್ತಿಯುತವಾಗಿ ಮುನ್ನೆಡೆದಾಗ ಸಮಾಜವೂ ಬೆಳವಣಿಗೆ ಹೊಂದುತ್ತದೆ. ಸಂಘಟನೆಗಳು ಸಮುದಾಯದ ಎಳ್ಗೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿ ನೊಂದವರ, ಹಿಂದುಳಿದವರ ಅಭಿವೃದ್ಧಿಗೆ ಸ್ವಂದಿಸಬೇಕು ಎಂದು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಾಯಿ ಇದರ ಅಧ್ಯಕ್ಷ ಸುರೇಶ್ ಆರ್. ಕಾಂಚನ್ ಹೇಳಿದರು.
ಬಗ್ವಾಡಿಯ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ  ನಡೆದ ಬ್ರಹ್ಮರಥೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊಗವೀರ ಮುಂದಾಳು ಕರುಣಾಕರ ಜಿ.ಪುತ್ರನ್ ಕಾರ್ಯಕ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಹಿಷಾಸುರ ಮರ್ದಿನಿ ಮಾಸ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು. ಮುಂಬಾಯಿ ಉದ್ಯಮಿ ಗೋಪಾಲ ಎಸ್.ಪುತ್ರನ್ ಸುಳ್ಸೆ, ಮೊಗವೀರ ಮುಂದಾಳು ಬಿ.ಹಿರಿಯಣ್ಣ ಚಾತ್ರಬೆಟ್ಟು, ಮಂಜು ನಾಯ್ಕ ಗುಜ್ಜಾಡಿ, ಉದ್ಯಮಿ ಕೆ.ಕೆ ಕಾಂಚನ್, ಮಂಜುನಾಥ ಮೊಗವೀರ, ಮೊಗವೀರ ಯುವ ಸಂಘನೆಯ ಜಿಲ್ಲಾಧ್ಯಕ್ಷ ಸದಾನಂದ ಬಳ್ಕೂರು, ಉದ್ಯಮಿ ಎನ್.ಡಿ. ಚಂದನ್, ಮುತ್ತ ಪ್ಲಾಸ್ಟಿಕ್ ಇಂಡಸ್ಟ್ರಿಸ್‍ನ ಮಾಲಿಕರಾದ ಮಹಾಬಲ ಎಂ. ಕುಂದರ್,  ಚಿನ್ಮಯಿ ಆಸ್ಪತ್ರೆಯ ಡಾ|ಉಮೇಶ ಪುತ್ರನ್, ಮೊಗವೀರ ಯುವ ಸಂಘಟನೆಯ ಅಧ್ಯಕ್ಷರಾದ ರಾಘವೇಂದ್ರ ನೆಂಪು, ದಿವಾಕರ ಮೆಂಡನ್, ನಾಗರಾಜ ಚಂದನ್, ಸುರೇಶ ಚಾತ್ರಬೆಟ್ಟು, ಮಹಿಷಾಸುರ ಮರ್ದಿನಿ ಪತ್ರಿಕೆಯ ಸಂಪಾದಕ ಅಶೋಕ್ ತೆಕ್ಕಟ್ಟೆ, ಶಿವಣ್ಣ ತೀರ್ಥಳ್ಳಿ ಮೊದಲಾದವರು ಉಪಸ್ಥಿತರಿದ್ದರು.
ಮೊಗವೀರ ಮಹಾಜನ ಸೇವಾ ಸಂಘ ಕುಂದಾಪುರ ಘಟಕದ ಕಾರ್ಯದರ್ಶಿ ಉದಯಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿದರು. ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿಯ ಅಧ್ಯಕ್ಷ ಎಂ.ಎಂ.ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಂಜುನಾಥ್ ಆರ್. ವಂದಿಸಿದರು. ನಂತರ ವಿವಿಧ ಅಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com