ಉದ್ಯಮಶೀಲತೆಯಿಂದ ಸಮಾಜ ನಿರ್ಮಾಣ ಆನಂದ ಸಿ.ಕುಂದರ್‌

ಸಿದ್ದಾಪುರ : ಉದ್ಯಮಶೀಲತೆ ಉದ್ಯೋಗಕ್ಕಿಂತ ಮೇಲು. ಉದ್ಯಮಶೀಲತೆಗೆ ಧೆ„ರ್ಯ ಮತ್ತು ಸಾಹಸ ಮನೋಪ್ರವೃತ್ತಿ ಬೇಕು. ಉದ್ಯಮದಿಂದ ಹೆಚ್ಚು ದುಡಿಯುವ ಅವಕಾಶ ಇದೆ. ಆದರೆ ಇಂದಿನ ಯುವಕರು ಉದ್ಯಮಕ್ಕಿಂತ ಉದ್ಯೋಗದೆಡೆಗೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಕೋಟದ ಉದ್ಯಮಿ ಆನಂದ ಸಿ. ಕುಂದರ್‌ ಅವರು ಹೇಳಿದರು.

ಅವರ ಜನತಾ ಫಿಶ್‌ ಮೀಲ್ಸ್‌ಗೆ ಶಂಕರನಾರಾಯಣದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡುತ್ತಿದ್ದರು.

ಉದ್ಯಮಶೀಲತೆಯಿಂದ ಸಮಾಜದ ಋಣವನ್ನು ಉತ್ಕÅಷ್ಟ ರೀತಿಯಲ್ಲಿ ತೀರಿಸುವ ಅವಕಾಶ ಇದೆ. ಆದ್ದರಿಂದ ವಿದ್ಯಾರ್ಥಿಗಳು ಉದ್ಯಮಶೀಲತೆ ಬೆಳೆಸಿಕೊಂಡು ಉತ್ತಮ ಸಮಾಜ ನಿರ್ಮಿಸುವಲ್ಲಿ ಕೊಡುಗೆ ನೀಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಕೈಗಾರಿಕೆಯ ವಿವಿಧ ಭಾಗಗಳ ಬಗ್ಗೆ ಸವಿವರವಾಗಿ ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ| ಉದಯ್‌ ಕುಮಾರ್‌ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಕಾಲೇಜಿನ ಆಂಗ್ಲ ಭಾಷಾ ಸಹಾಯಕ ಪ್ರಾಧ್ಯಾಪಕ ಪ್ರಸಾದ್‌ ಎನ್‌., ಉಪನ್ಯಾಸಕರಾದ ರವಿಚಂದ್ರ, ಮಹೇಶ್‌ ಕೊಠಾರಿ, ಪ್ರೀತಿ ಶೆಟ್ಟಿ, ಉಷಾ ಮುಂತಾದವರು ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ವೆಂಕಟರಾಮ ಭಟ್‌ ಕಾರ್ಯಕ್ರಮ ಸಂಯೋಜಿಸಿದ್ದರು. ಡಾ| ಸಂಪತ್‌ ಕುಮಾರ್‌ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com