ಯಾರನ್ನು ವೈಯಕ್ತಿಕ ನಿಂದನೆ ಮಾಡುವುದಿಲ್ಲ: ಹೆಗ್ಡೆ

ತೆಕ್ಕಟ್ಟೆ: ನಾನು ಯಾವ ಚುನಾವಣೆಯಲ್ಲಿಯೂ ಯಾರನ್ನು ವೈಯಕ್ತಿಕವಾಗಿ ನಿಂದಿಸಿಲ್ಲ ಆದರೆ ಈ ಬಾರೀ ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು

ಅವರು ತೆಕ್ಕಟ್ಟೆ ಗ್ರಾ.ಪಂ ವ್ಯಾಪ್ತಿಯ ಪ್ರತಿ ಮನೆ ಮನೆಗಳಿಗೆ ತೆರಳುವ ಮೂಲಕ ಮತಯಾಚನೆ ಮಾಡಿ ಉದಯವಾಣಿಯೊಂದಿಗೆ ಮಾತನಾಡಿದರು.

ಉಡುಪಿ- ಚಿಕ್ಕ ಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ನಿಂದ ಏನಾದರೂ ನಿಮ್ಮ ಪಕ್ಷಗಳಿಗೆ ತೊಂದರೆಯಾಗುತ್ತದೆಯೇ ಎಂದು ಉದಯವಾಣಿ ಪ್ರತಿನಿಧಿ ಪ್ರಶ್ನೆ ಕೇಳಿದಾಗ ಉತ್ತರಿಸಿದ ಅವರು ಯಾವುದೇ ರೀತಿಯಲ್ಲಯೂ ಪರಿಣಾಮ ಬೀರುವುದಿಲ್ಲ ಆದರೆ ಜೆಡಿಎಸ್‌ ಪಕ್ಷ ನಮ್ಮೊಂದಿಗೆ ಸೇರಿಕೊಳ್ಳುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಮತದಾರ ಗಿರಿಜಮ್ಮ ಐತಾಳ್‌, ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ತೆಕ್ಕಟ್ಟೆ ಗ್ರಾ.ಪಂ ಮಾಜಿ ಅಧ್ಯಕ್ಷ ವಿಜಯ ಭಂಡಾರಿ, ತೆಕ್ಕಟ್ಟೆ ಗ್ರಾ.ಪಂ ಉಪಾಧ್ಯಕ್ಷೆ ಗಿರಿಜಾ ಕೊಮೆ, ಮುತ್ತಯ್ಯ ಪೂಜಾರಿ, ತೆಕ್ಕಟ್ಟೆ ಗ್ರಾ.ಪಂ ಸದಸ್ಯ ಶೇಖರ್‌ ಕಾಂಚನ್‌ ಕೊಮೆ, ರಾಜು ತೋಟದಬೆಟ್ಟು ಹಾಗೂ ನೂರಾರು ಕಾಂಗ್ರಸ್‌ ಕಾರ್ಯಕರ್ತರು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com