ನರೇಂದ್ರ ಮೋದಿ ದೇಶದ ಪ್ರಧಾನಿ ಯಾಗುವವರೆಗೆ ವಿರಮಿಸೆವು

ಗಂಗೊಳ್ಳಿ: ನರೇಂದ್ರ ಮೋದಿಯವರು ಈ ದೇಶದ ಪ್ರಧಾನ ಮಂತ್ರಿಯಾಗಬೇಕೆನ್ನುವುದು ಈ ದೇಶದ ನಾಗರಿಕರ ಬಯಕೆಯಾಗಿದೆ. ನರೇಂದ್ರ ಮೋದಿ ಈ ದೇಶದ ಪ್ರಧಾನ ಮಂತ್ರಿಯಾಗುವವರೆಗೆ ನಮೋ ಬ್ರಿಗೇಡ್ ಕಾರ್ಯಕರ್ತರು ವಿರಮಿಸುವುದಿಲ್ಲ ಎಂದು ನಮೋ ಬ್ರಿಗೇಡ್‌ನ ಗಂಗೊಳ್ಳಿ ಘಟಕದ ಅಧ್ಯಕ್ಷ ಬಿ.ಗಣೇಶ ಶೆಣೈ ಹೇಳಿದರು.

  ಅವರು ನಮೋ ಬ್ರಿಗೇಡ್‌ನ ಗಂಗೊಳ್ಳಿ ಘಟಕದ ವತಿಯಿಂದ ಗಂಗೊಳ್ಳಿಯ ಪ್ರಮುಖ ಬೀದಿಗಳಲ್ಲಿ ಮತ ಪ್ರಚಾರ ನಡೆಸುತ್ತಾ ಮಾತನಾಡಿದರು.
  ಕಳೆದ 10 ವರ್ಷಗಳ ಕಾಂಗ್ರೆಸ್ ನೇತೃತ್ವದ ಯುಪಿ‌ಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಳ್ಳಲಿಲ್ಲ. ದೇಶದ ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ವಿಫಲವಾಗಿರುವ ಕಾಂಗ್ರೆಸ್‌ನ್ನು ಈ ಬಾರಿಯ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಾರದಂತೆ ದೂರವಿಡಬೇಕು. ಕಾಂಗ್ರೆಸ್ ಮುಕ್ತ ಭಾರತ ಕಟ್ಟಲು, ದುರಾಡಳಿತದ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಕಿತ್ತೊಗೆಯಲು ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಕೇಂದ್ರದಲ್ಲಿ ಆಡಳಿತಕ್ಕೆ ತರಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

  ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಾನಂದ ಶೇರುಗಾರ್, ಕಾರ್ಯದರ್ಶಿ ಉಮಾನಾಥ ದೇವಾಡಿಗ, ನಮೋ ಬ್ರಿಗೇಡ್ ಕಾರ್ಯಕರ್ತರಾದ ದಿಲೀಪ್ ಖಾರ್ವಿ, ಜಯರಾಮ ದೇವಾಡಿಗ, ಅಶೋಕ ಜಿ., ಸಂತೋಷ ಖಾರ್ವಿ, ಮೋಹನ ಖಾರ್ವಿ, ಗಜಾನನ ಶೆಣೈ, ಅಕ್ಷಯ ಶೆಣೈ, ಗಣೇಶ ಕಿಣಿ, ಜಿ.ರಾಘವೇಂದ್ರ ಆಚಾರ್ಯ, ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಖಾರ್ವಿ, ರಾಘವೇಂದ್ರ ಖಾರ್ವಿ. ಸುಧಾಕರ ಖಾರ್ವಿ ಮೊದಲಾವರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com