ಶಿಕ್ಷಕರು ಸೃಜನಶೀಲರಾಗಿರಲಿ: ಶ್ರೀಧರ ಬಿ.ವಿ

ತಲ್ಲೂರು: ಸರ್ವ ಶಿಕ್ಷಾ ಆಭಿಯಾನ, ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರು, ಕಲಿ-ಕಲಿಸು ಮಾದರಿ ಕ್ಲಸ್ಟರ್, ಮಾದರಿ ಶಾಲೆ ಯೋಜನೆ 2012-13, ಮಾಡೆಲ್ ಸ್ಕೂಲ್ ಇನಿಶಿಯೇಟಿವ್ ಕಾರ್ಯಕ್ರಮದನ್ವಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಲ್ಲೂರು ಇಲ್ಲಿ ನಡೆದ ಕಲಾ ಶೈಕ್ಷಣಿಕ ಸಮ್ಮೇಳನದಲ್ಲಿ  ಕೆಂಚನೂರು ಸ.ಹಿ.ಪ್ರಾ.ಶಾಲೆ ಮತ್ತು ಕನ್ಯಾನ  ಸ.ಹಿ.ಪ್ರಾ.ಶಾಲೆ ಹಾಗೂ ಶಿಕ್ಷಕಿಯರಾದ ಲಕ್ಷ್ಮೀ ಬಿ ಮತ್ತು ತಂಡ ಬೈಂದೂರು ಸಮೂಹ ಸಂಪನ್ಮೂಲ ವ್ಯಕ್ತಿ ಸುಮನಾ ಮತ್ತು ತಂಡ ಕುಂದಾಪುರ ಇವರು ನಡೆಸಿದ ಕಾರ್ಯಕ್ರಮದ ಕಲಾ ಶೈಕ್ಷಣಿಕ ಬಾನುಲಿ ದ್ವನಿ ಮುದ್ರಣ ಕಾರ್ಯಕ್ರಮ ಆಕಾಶವಾಣಿ ಮಂಗಳೂರು ಇವರಿಂದ ನಡೆಯಿತು.
        ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಕಾಶವಾಣಿ ಮಂಗಳೂರು ಇದರ ನಿರ್ವಾಹಕ ಶ್ರೀಧರ ಬಿ.ವಿ. ವಹಿಸಿ ಮಾತನಾಡಿ ಶಿಕ್ಷಕರು ಸಾಂಸ್ಕ್ರತಿಕ ಚಟುವಟಿಕೆಗಳ ಮೂಲಕ ವಿಧ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗುವಂತೆ ಪ್ರೇರಿಪಿಸಬೇಕು ಎಂದರು.
      ಮುಖ್ಯ ಅತಿಥಿಗಳಾಗಿ ಆಕಾಶವಾಣಿ ಮಂಗಳೂರು ಕಾರ್ಯಕ್ರಮ ನಿರ್ವಾಹಕರಾದ ಕಾನ್ಸೆಪ್ಟ್ ಪೆರ್ನಾಂಡಿಸ್ ಸುರೇಶ್, ಸ.ಪ್ರೌ.ಶಾಲೆ.ತಲ್ಲೂರು ಮುಖ್ಯೋಪಾಧ್ಯಯ  ಸಣ್ಣ ಚಿಕ್ಕಯ್ಯ ,  ಕ. ರಾ. ಪ್ರಾ. ಶಾಲಾ ಶಿಕ್ಷಕರ ಸಂಘ  ಬೈಂದೂರು ವಲಯದ ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಬಾಲಯ್ಯ ಶೇರುಗಾರ್ ಕಾರ್ಯದರ್ಶಿಗಳು ಕ. ರಾ. ಪ್ರಾ. ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯ. ನಾಗೇಶ ಭಂಡಾರಿ ಅಧ್ಯಕ್ಷರು ಶಾಲಾಭಿವೃಧ್ಧಿ ಸಮಿತಿ ತಲ್ಲೂರು ಉಪಸ್ಥಿತರಿದ್ದರು.ಸಮ್ಮೇಳನದ ಸಂಯೋಜಕರಾದ ಗಣಪತಿ ಹೋಬಳಿ
ದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕರಾದ  ಶಂಕರ್ ಸ್ವಾಗತಿಸಿದರು.ಶಿಕ್ಷಕರಾದ ದಿನೇಶ್ ಆಜ್ರಗದ್ದೆ ಕಾರ್ಯಕ್ರಮ ನಿರೂಪಿಸಿದರು.ಉದಯ ಭಂಡಾರ್ಕರ್  ಸಬ್ಲಾಡಿ ಧನ್ಯವಾದ ಸಲ್ಲಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com