ನೋಕಿಯಾ ಮೊಬೈಲ್ ಮೈಕ್ರೋಸಾಫ್ಟ್ ಮೊಬೈಲ್ ಆಗಲಿದೆ.


ಹೊಸದಿಲ್ಲಿ:ವಿಶ್ವದಲ್ಲಿ ಮೊಬೈಲ್‌ ಫೋನ್‌ ರಂಗದಲ್ಲಿ ಮುಂಚೂಣಿಯಲ್ಲಿರುವ ನೋಕಿಯಾ ಮೊಬೈಲ್‌ ಇನ್ನು ಮುಂದೆ ಮೈಕ್ರೋಸಾಫ್ಟ್ ಮೊಬೈಲ್‌ ಎಂಬ ಹೊಸ ಹೆಸರು ಪಡೆಯಲಿದೆ. ಈ ತಿಂಗಳಾಂತ್ಯದಲ್ಲಿ 7.2 ಶತಕೋಟಿ ಡಾಲರ್‌ಗಳ ನೋಕಿಯಾ - ಮೈಕ್ರೋಸಾಫ್ಟ್ ವ್ಯವಹಾರ ಅಧಿಕೃತವಾಗಿ ಕೊನೆಗೊಳ್ಳಲಿದೆ.

    ಈ ಕುರಿತಾಗಿ ಯಾವುದೇ ಅಧಿಕೃತ ಪ್ರಕಟನೆ ಹೊರಡಿಸಿಲ್ಲದ ಹೊರತಾಗಿಯೂ, ಕಂಪೆನಿಯು ತನ್ನ ಪೂರೈಕೆದಾರರಿಗೆ ಬರೆದಿರುವ ಪತ್ರದಲ್ಲಿ, ನೋಕಿಯಾ ಫೋನ್‌ ವಿಭಾಗವನ್ನು ಇನ್ನು ಮುಂದೆ ಮೈಕ್ರೋಸಾಫ್ಟ್ ಮೊಬೈಲ್‌ ಎಂದು ಪುನರ್‌ ನಾಮಕರಣ ಮಾಡಲಾಗುವುದು ಎಂದು ತಿಳಿಸಲಾಗಿದೆ.


ಮಾಧ್ಯಮಕ್ಕೆ ಸೋರಿಹೋಗಿರುವ ಇ-ಮೇಲ್‌ ಸಾರಾಂಶ: ಮೈಕ್ರೋಸಾಫ್ಟ್ ಮತ್ತು ನೋಕಿಯಾ ನಡುವಿನ ವ್ಯವಹಾರ ಈ ಎಪ್ರಿಲ್‌ ತಿಂಗಳಾಂತ್ಯದಲ್ಲಿ ಮುಗಿದೊಡನೆಯೇ ನೋಕಿಯಾ ಕಾರ್ಪೋ ರೇಶನ್‌/ನೋಕಿಯಾ ಓವೈಜೆ ಇನ್ನು ಮುಂದೆ ಮೈಕ್ರೋಸಾಫ್ಟ್ ಮೊಬೈಲ್‌ ಓವೈ ಎಂಬ ಹೊಸ ಹೆಸರನ್ನು ಪಡೆಯುತ್ತದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com