ಬೈಂದೂರು ಚರ್ಚಿನಲ್ಲಿ ಪಾಮ್ ಸಂಡೆ ಆಚರಣೆ

ಬೈಂದೂರು: ಬೈಂದೂರಿನ ಹೋಲಿಕ್ರಾಸ್ ಚರ್ಚಿನಲ್ಲಿ ಕ್ರೈಸ್ತರ ಪವಿತ್ರ ವಾರದ ಮೊದಲ ದಿನವಾದ ಎ.13ರಂದು ಗರಿಗಳ ರವಿವಾರ(ಪಾಮ್ ಸಂಡೆ)ವನ್ನು ಸಂಭ್ರಮದಿಂದ ಆಚರಿಸಿದರು.


ಬೆಳಿಗ್ಗೆಯಿಂದಲೇ ಅನೇಕ ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಚರ್ಚಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ವಿಶೇಷ ಬಲಿಪೂಜೆಯಲ್ಲಿ ಭಾಗವಹಿಸಿದರು. 
  ಈ ಸಂದರ್ಭದಲ್ಲಿ ಚರ್ಚಿನ ಧರ್ಮಗುರು ರೆ. ಫಾ. ರೊನಾಲ್ಡ್ ಮಿರಾಂದ್, ಬೈಂದೂರು ಚರ್ಚಿನ ಉಪಾಧ್ಯಕ್ಷ ರೊಬೊರ್ಟ್ ರೆಬೆಲ್ಲೊ, ಕಾರ್ಯದರ್ಶಿ ಶ್ರೀಮತಿ ಸಿಸಿಲಿಯಾ ರೆಬೆರೊ, ಹೆನ್ರಿ ಲೋಬೋ ಶ್ರೀಮತಿ ಪೆಲ್ಸಿನ್ ಲೋಬೊ ರವರು ಉಪಸ್ಥಿತರಿದ್ದರು.


-  ಲಾರೆನ್ಸ್ ಫೆರ್ನಾಂಡಿಸ್ 

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com