ಬಿಹಾರ: ಒಂದೇ ಕುಟುಂಬದಲ್ಲಿ 47 ಮತದಾರರು

ಪಟನಾ: ಅವಿಭಕ್ತ ಕುಟುಂಬಗಳು ಬಹುತೇಕ ಕಣ್ಮರೆಯಾಗಿರುವ ಈ ದಿನಗಳಲ್ಲಿ ಅಳಿದುಳಿದ ಅವಿಭಕ್ತ ಕುಟುಂಬಗಳಿಗೆ ಚುನಾವಣೆ ಸಂದರ್ಭದಲ್ಲಿ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಬಿಹಾರದಲ್ಲಿರುವ ಇಂಥದ್ದೊಂದು ಕುಟುಂಬದ ಮತ ಗಳಿಸಲು ರಾಜಕಾರಣಿಗಳು ಬಗೆಬಗೆಯ ಕಸರತ್ತುಗಳಲ್ಲಿ ತೊಡಗಿದ್ದಾರೆ.

ಕಿಶಾನ್‌ಗಂಜ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಪೂರ್ಣಿಯಾ ಜಿಲ್ಲೆಯ ಜಿಯಾಗಾಚಿ ಗ್ರಾಮದಲ್ಲಿರುವ ಈ ಕುಟುಂಬದಲ್ಲಿ 85 ಮಂದಿ ಇದ್ದಾರೆ. ಆ ಪೈಕಿ 47 ಮಂದಿ ಮತದಾರರು. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳು ಈ ಕುಟುಂಬವನ್ನು ಓಲೈಸಿಕೊಳ್ಳಲು ಶ್ರಮಪಡುತ್ತಿವೆ. ಈ ಕುಟುಂಬ ಬಿಹಾರದ ಅತ್ಯಂತ ದೊಡ್ಡ ಕುಟುಂಬ ಎಂದೂ ಹೇಳಲಾಗುತ್ತಿದೆ.

ಕಿಶಾನ್‌ಗಂಜ್‌ ಕ್ಷೇತ್ರದಲ್ಲಿ ಶೇ.66.7ರಷ್ಟು ಮುಸ್ಲಿಮರೇ ಇದ್ದಾರೆ. ಜೆಡಿಯು ಹಾಗೂ ಕಾಂಗ್ರೆಸ್‌ನಿಂದ ಮುಸ್ಲಿಂ ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಬಿಜೆಪಿ ಹಿಂದು ಹುರಿಯಾಳನ್ನು ಕಣಕ್ಕಿಳಿಸಿದೆ. 47 ಮತ ಹೊಂದಿರುವ ಈ ಬೃಹತ್‌ ಮುಸ್ಲಿಂ ಕುಟುಂಬದ ಮತಗಳನ್ನು ಒಲಿಸಿಕೊಳ್ಳಲು ಮೂರೂ ಪಕ್ಷಗಳು ಪ್ರಯತ್ನಿಸುತ್ತಿವೆ. ಈ ಕುಟುಂಬ ಪ್ರತಿ ನಿತ್ಯ 20 ಕೆ.ಜಿ. ಅಕ್ಕಿ ಹಾಗೂ ಅಷ್ಟೇ ತೂಕದ ಹಿಟ್ಟನ್ನು ಆಹಾರಕ್ಕೆ ಬಳಸುತ್ತದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com