ಅಟಲ್‌ರನ್ನೂ ಮೋದಿ ಮೂಲೆಗುಂಪು ಮಾಡುತ್ತಿದ್ದರು: ರಾಹುಲ್‌

ರಾಜಸ್ಥಾನ: ಒಂದು ವೇಳೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಈಗ ಸಾರ್ವಜನಿಕ ಜೀವನದಲ್ಲಿ ಇದ್ದಿದ್ದರೂ, ಬಿಜೆಪಿಯಲ್ಲಿನ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಜಸ್ವಂತ್‌ ಸಿಂಗ್‌ ಅವರಿಗೆ ಆದ ಗತಿಯೇ ಬರುತ್ತಿತ್ತು. ನರೇಂದ್ರ ಮೋದಿ ತಮ್ಮ ಮಹತ್ವಾಕಾಂಕ್ಷೆ (ಪ್ರಧಾನಿ ಆಗುವ) ಈಡೇರಿಸಿಕೊಳ್ಳಲು ವಾಜಪೇಯಿ ಅಂಥವನ್ನೂ ರಾಜಕೀಯವಾಗಿ ಮುಗಿಸುತ್ತಿದ್ದರು ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭಾನುವಾರ ವ್ಯಂಗ್ಯವಾಡಿದ್ದಾರೆ.

ಕರೌಲಿ  ರ್ಯಾಲಿಯೊಂದರಲ್ಲಿ ಮಾತನಾಡಿದ ಅವರು, ಮೋದಿ ವಿರುದ್ಧದ ವಾಗ್ಧಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಹೋದಲೆಲ್ಲ, ತಮ್ಮನ್ನು ಚೌಕಿದಾರ (ಕಾವಲುಗಾರ)ನನ್ನಾಗಿ ಮಾಡುವಂತೆ ಮತದಾರರನ್ನು ಕೇಳಿಕೊಳ್ಳುತ್ತಿದ್ದಾರೆ. ಆದರೆ, ಅವರು ಕೇವಲ ವ್ಯಾಪಾರಿಗಳ ಕಾವಲುದಾರರಾಗಿದ್ದಾರೆ. ಹಿರಿಯ ನಾಯಕ(ಅಡ್ವಾಣಿ)ರನ್ನು ಕಡೆಗಣಿಸಿದ್ದಾರೆ. 'ಅದಾನಿ' ಕಂಪನಿಯನ್ನು ಮುಂದೆತಂದಿದ್ದಾರೆ ಎಂದು ಟೀಕಿಸಿದರು.

ಮೋದಿ ಗುಜರಾತ್‌ ಅಭಿವೃದ್ಧಿ ಮಾಡಿರುವುದಾಗಿ ಜಂಭಕೊಚ್ಚಿಕೊಳ್ಳುತ್ತಾರೆ. ಆದರೆ, ಕಾರ್ಮಿಕರು ಮತ್ತು ರೈತರು ತಮ್ಮ ಕಠಿಣ ಶ್ರಮದಿಂದಾಗಿ ಗುಜರಾತನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com