ಸೌದಿ ಅರೇಬಿಯಾದಲ್ಲಿ ರಾಮನಾಮ ಜಪಿಸುವುದಕ್ಕೆ ನಿಷೇಧ

ಲಂಡನ್: ಮುಂದಿನ ತಿಂಗಳೇ ಶ್ರೀರಾಮನವಮಿ. ಅದು ಭಾರತೀಯರ ಭಕ್ತಿಭಾವದ ಹಬ್ಬ/ ಆಚರಣೆ. ಆದರೆ ಅತ್ತ, ಸೌದಿ ಅರೇಬಿಯಾದಲ್ಲಿ ರಾಮನಾಮ ಜಪಿಸುವುದಕ್ಕೆ ನಿಷೇಧ ಹೇರಲಾಗಿದೆ. ಯಾಕಪ್ಪಾ ಅಂದರೆ ಅಲ್ಲಿನ ರಾಜಾಡಳಿತ ಮತ್ತು ಸಂಸ್ಕೃತಿಗೆ ಧಕ್ಕೆಯೊದಗುತ್ತದೆ. ಹಾಗಾಗಿ ರಾಮನಾಮಕ್ಕೆ ಕೊಕ್ಕೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ದೇಶದ ಧರ್ಮ ಮತ್ತು ಸಂಸ್ಕೃತಿಗೆ ವಿರೋಧಾಭಾಸವಾಗುವ ಒಟ್ಟು 50 ಹೆಸರುಗಳನ್ನು ಸೌದಿ ಅರೇಬಿಯಾ ರಾಜಾಡಳಿತ ಗುರುತಿಸಿದ್ದು, ಆ ಹೆಸರುಗಳನ್ನು ದೇಶದ ಪ್ರಜೆಗಳು ತಮ್ಮ ಮಕ್ಕಳಿಗೆ ಇಡಬಾರದು ಎಂದು ಅಲ್ಲಿನ ಸರಕಾರ ಆದೇಶ ನೀಡಿದೆ. ಇದರಲ್ಲಿ ಭಾರತದ ರಾಮ ಮತ್ತು ಮಾಯಾ ನಾಮಕ್ಕೆ ಕತ್ತರಿಬಿದ್ದಿದೆ. ಇಸ್ಲಾಂ ವಿರೋಧಿ ಮತ್ತು ಇಸ್ಲಾಮೇತರ ಹೆಸರುಗಳು ಇವಾಗಿವೆ. ಹಾಗಾಗಿ ನಮ್ಮ ಮಕ್ಕಳಿಗೆ ಈ ಐವತ್ತೂ ಹಸರುಗಳನ್ನು ನಮ್ಮ ಮಕ್ಕಳಿಗೆ ನಾಮಕರಣ ಮಾಡುವುದು ಬೇಡ ಎಂದು ಅಲ್ಲಿನ ಸರಕಾರ ಸ್ಪಷ್ಟಪಡಿಸಿದೆ. (3626 ರಾಮನ ಹೆಸರಲ್ಲಿ 3309 ಕೃಷ್ಣ ಹೆಸರಿನಲ್ಲಿ!) ಪಟ್ಟಿ ಹೇಗಿದೆಯೆಂದರೆ ಅದರಲ್ಲಿ Binyamin ಹೆಸರನ್ನೂ ನಿಷೇಧಿಸಲಾಗಿದೆ. ವಾಸ್ತವವಾಗಿ ಈ ಹೆಸರು ಇಸ್ಲಾಂ ಪ್ರವಾದಿ ಜಾಕೆಬ್ ಪುತ್ರನ ಹೆಸರು. ಅದಕ್ಕೂ ನಿಷೇಧ ಹೇರಲಾಗಿದೆ. ಏಕೆ ಅಂದರೆ ಇಸ್ರೇಲಿನ ಈಗಿನ ಪ್ರಧಾನಿ ಇದ್ದಾರಲ್ಲಾ ಬೆಂಜಮಿನ್ ನೆತನ್ಯಾಹು. ಆತನ ಹೆಸರು ಈ Binyamin ಜತೆಗೆ ತಳಕು ಹಾಕಿಕೊಂಡಿದೆ. ಹಾಗಾಗಿ ಅದು ನಮ್ಮ ಹಿತಾಸಕ್ತಿಗೆ ವಿರೋಧವಾಗಿದೆ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com