ವಿವಾದದಲ್ಲಿ ರಾಮದೇವ್‌

ಅಳ್ವರ್‌ (ರಾಜಸ್ಥಾನ): ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರ ಪ್ರಚಾರ ಮಾಡುತ್ತಿರುವ ಯೋಗ ಗುರು ಬಾಬಾ ರಾಮದೇವ್‌ ಮತ್ತೂಂದು ವಿವಾದದಲ್ಲಿ ಸಿಲುಕಿದ್ದಾರೆ. ಅಳ್ವರ್‌ನ ಬಿಜೆಪಿ ಅಭ್ಯರ್ಥಿ ಮಹಾಂತ ಚಂದನಾಥ ಅವರು, ಬಾಬಾ ಸುದ್ದಿಗೋಷ್ಠಿ ವೇಳೆ "ನನಗೆ ಹಣ ಸಾಲುತ್ತಿಲ್ಲ' ಎಂದು ಗುಟ್ಟಾಗಿ ಕಿವಿಯಲ್ಲಿ ಹೇಳುತ್ತಿರುವುದು ಮೈಕ್‌ಗಳಲ್ಲಿ ರೆಕಾರ್ಡ್‌ ಆಗಿಬಿಟ್ಟಿದೆ. 

ಅವಾಂತರ ಆಗಬಹುದು ಎಂದು ಅರಿತ ರಾಮದೇವ್‌, "ಮೂರ್ಖ, ಕ್ಯಾಮರಾಗಳಿವೆ. ಹಣದ ಬಗ್ಗೆ ಮಾತನಾಡಬೇಡ' ಎಂದು ಮಹಾಂತ ಅವರಿಗೆ ಹೇಳಿದ್ದೂ ಮೈಕ್‌ಗಳಲ್ಲಿ ರೆಕಾರ್ಡ್‌ ಆಗಿದೆ. ಮತದಾರರಿಗೆ ಹಣ ಹಂಚುವ ಸಂಚು ಈ ಹಿಂದೆ ಅಡಗಿದ್ದು, ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರುವುದಾಗಿ ಕಾಂಗ್ರೆಸ್‌ ಪಕ್ಷ ಹೇಳಿದೆ

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com