ಆದಿತ್ಯ ಛೋಪ್ರಾ ಜೋತೆ ದಾಂಪತ್ಯಕ್ಕೆ ಕಾಲಿಟ್ಟ ರಾಣಿ ಮುಖರ್ಜಿ

ಮುಂಬಯಿ : ಬಾಲಿವುಡ್‌ನ‌ ಖ್ಯಾತ ನಟಿ ರಾಣಿ ಮುಖರ್ಜಿ ಹಾಗೂ ನಿರ್ಮಾಪಕ ಆದಿತ್ಯ ಛೋಪ್ರಾ ಅವರು ವಿವಾಹವಾಗಿದ್ದಾರೆ ಎಂದು ಯಶ್‌ ರಾಜ್‌ ಚಿತ್ರ ನಿರ್ಮಾ ಣ ಸಂಸ್ಥೆ ಮಂಗಳವಾರ ಘೋಷಿಸಿದೆ.     ರಾಣಿ ಮುಖರ್ಜಿ ಹಾಗೂ ಆದಿತ್ಯ ಛೋಪ್ರಾ ಅವರು ಎಪ್ರಿಲ್‌ 21 ರ ರಾತ್ರಿ ಇಟಲಿಯಲ್ಲಿ ವಿವಾಹವಾಗಿದ್ದಾರೆ. ಕೇವಲ ಅಪ್ತ ಕೆಲ ಸ್ನೇಹಿತರು ಹಾಗೂ ಕುಟುಂಬ ಸದಸ್ಯರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು ಈ ವಿಷಯವನ್ನು  ನಾವು ಬಹಳ ಖುಷಿ ಪಟ್ಟು ತಿಳಿಸಲು ಬಯಸುತ್ತೇವೆ ಎಂದು  ಯಶ್‌ ರಾಜ್‌ ಚಿತ್ರ ನಿರ್ಮಾಣ ಸಂಸ್ಥೆ ಹೇಳಿದೆ .  ಇಲ್ಲಿಯವರೆಗೆ ರಾಣಿಯಾಗಲಿ ಆದಿತ್ಯ ಛೋಪ್ರಾ ಅವರಾಗಲಿ ಎಲ್ಲಿಯೂ ಮದುವೆಯ ಬಗ್ಗೆ ಹೇಳಿಕೆ ನೀಡಿಲ್ಲ.  ಆದಿತ್ಯ ಛೋಪ್ರಾ ಅವರಿಗೆ ಇದು ಎರಡನೇ ಮದುವೆಯಾಗಿದ್ದು 2009ರಲ್ಲಿ ಮೊದಲ ಪತ್ನಿ ಪಾಯಲ್‌ ಖನ್ನಾ ಅವರಿಗೆ ವಿಚ್ಛೇಧನ ನೀಡಿದ್ದರು. ಆ ಬಳಿಕ ರಾಣಿ ಮುಖರ್ಜಿ ಹಾಗೂ ಆದಿತ್ಯ ನಡುವೆ ಪ್ರೇಮಾಂಕುರವಾಗಿತ್ತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com