29ರಂದು ಮರುಮತದಾನ

ಕುಂದಾಪುರ: ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬೈಂದೂರು ವಿಧಾನಸಭೆ ಕ್ಷೇತ್ರದ ಮತಗಟ್ಟೆ ಸಂಖ್ಯೆ 174 ಉಪ್ಪಿನಕುದ್ರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏ.29ರಂದು ಮರುಮತದಾನ ನಡೆಯಲಿದೆ. 
       ಏ.17ರಂದು ನಡೆದ ಸಾರ್ವತ್ರಿಕ ಮತದಾನದ ಸಂದರ್ಭ ಇಲ್ಲಿ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಆದೇಶದಂತೆ ಮರುಮತದಾನ ನಡೆಯಲಿದೆ. 
       ಮತಗಟ್ಟೆ ಸಂಖ್ಯೆ 174ಕ್ಕೆ ಸಂಬಂಧಿಸಿದ ವಾರ್ಡ್ 2ರಲ್ಲಿ ಮನೆ ನಂಬ್ರ 285 ಮತ್ತು ಮೇಲ್ಪಟ್ಟು ಹಾಗೂ ವಾರ್ಡ್ 3ರ ವ್ಯಾಪ್ತಿಯ ಮತದಾರರು ಏ.29ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆ ತನಕ ಮರುಮತದಾನದಲ್ಲಿ ಭಾಗವಹಿಸಿ ಮತ ಚಲಾಯಿಸಬೇಕು. ಶಾಯಿ ಗುರುತನ್ನು ಎಡಗೈಯ ಮಧ್ಯದ ಬೆರಳಿಗೆ ಹಾಕಲಾಗುವುದು ಎಂದು ತಾಲೂಕು ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com