ತಾಲೂಕಿನ ಪ್ರಥಮ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಸಿದ್ಧತೆ

ಕುಂದಾಪುರ: ಕುಂದಾಪುರ ತಾಲೂಕಿನಲ್ಲಿ ಮೊದಲ ಬಾರಿಗೆ ಏ.26ಕ್ಕೆ ದಾಸ ಸಾಹಿತ್ಯ ಶೈಲಿಯಲ್ಲಿ  ರಂದು ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ಕೋಣಿ ಕೋಟೇಶ್ವರ ರಸ್ತೆಯ ನೀರಾಡಿಮಕ್ಕಿಯಲ್ಲಿ ಉತ್ಸವಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. 
    ಅಂದು ಸಂಜೆ 5ರಿಂದ 8ರ ತನಕ ಕಲ್ಯಾಣೋತ್ಸವ ನಡೆಯಲಿದ್ದು ಬೆಂಗಳೂರಿನ ವಾರಿ ಫೌಂಡೇಶನ್ ಕಲ್ಯಾಣೋತ್ಸವ ಕಾರ್ಯ ನಡೆಸಿಕೊಡಲಿದೆ. ಬಳಿಕ 20 ಸಾವಿರಕ್ಕೂ ಅಧಿಕ ಮಂದಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಯಿಂದ 6ರ ತನಕ ದೀಪಿಕಾ ಪಾಂಡುರಂಗಿ ಅವರಿಂದ ದಾಸರ ಪಾದಗಳ ಹಾಡುಗಾರಿಕೆ ನಡೆಯಲಿದೆ.    
    20 ಸಾವಿರಕ್ಕೂ ಅಧಿಕ ಮಂದಿ ಕುಳಿತುಕೊಳ್ಳಬಹುದಾದ ಆಕರ್ಷಕ ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ವಾಹನ ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. 
   ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲು ಕೋಟೇಶ್ವರ-ಕೋಣಿ, ಬಸ್ರೂರು ಮೂರುಕೈ-ನೇರಂಬಳ್ಳಿ, ಬಸ್ರೂರು-ಎಚ್‌ಎಂಟಿ-ಅಗ್ನಿಶಾಮಕ ಠಾಣೆಯ ಮಾರ್ಗದ ಮೂಲಕ ಮಾರ್ಗಸೂಚಿ ಅಳವಡಿಸಲಾಗುತ್ತಿದೆ ಎಂದು ನೇರಂಬಳ್ಳಿ ವೆಂಕಟ್ರಾಮ ಮತ್ತು ಕುಟುಂಬಸ್ಥರು ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com