ಎ.11ರಿಂದ ಸುರಭಿ 'ಬಾಲಸಂಸ್ಕಾರ್ ಶಿಬಿರ

ಬೈಂದೂರು: ಇಲ್ಲಿನ ಸುರಭಿ ಕಲಾ ಸಂಸ್ಥೆಯ ಆಶ್ರಯದಲ್ಲಿ ಕಳೆದ 13 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಗ್ರಾಮೀಣ ಭಾಗದ ವಾರ್ಷಿಕ ಬೇಸಿಗೆ ಶಿಬಿರವನ್ನು ಪ್ರಸ್ತುತ ವರ್ಷ ಬೆಂಗಳೂರಿನ ಜೀನಿಯಸ್ ಬ್ರೈನ್ ಅಬ್ಯಾಕಸ್ ಸಂಸ್ಥೆಯ ಆಶ್ರಯದೊಂದಿಗೆ ಸುರಭಿ ಬಾಲ ಸಂಸ್ಕಾರ್ ಎನ್ನುವ ಹೆಸರಿನೊಂದಿಗೆ ಇದೇ ಎಪ್ರಿಲ್ ತಿಂಗಳ 11 ರಿಂದ 22ರ ವರೆಗೆ 10 ದಿನಗಳ ಕಾಲ ಬೈಂದೂರಿನ ಶಾಸಕರ ಭವನದ ಬಳಿ ಇರುವ ಪರಿಶಿಷ್ಠ ವರ್ಗದ  ಆಶ್ರಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿಬಿರದಲ್ಲಿ ವಿಶೇಷವಾಗಿ ವೇದಿಕ್ ಗಣಿತ ಹಾಗೂ ಅಬ್ಯಾಕಸ್‌ನ್ನು ಪರಿಚಯಿಸಲಾಗುತ್ತಿದ್ದು ಉಳಿದಂತೆ ಸೂರ್ಯ ನಮಸ್ಕಾರ್, ಯೋಗಾಸನ, ರಾಮರಕ್ಷಾಸ್ತೋತ್ರ, ಹನುಮಾನ್ ಚಾಲೀಸ್, ಮಾರುತಿ ಸ್ತೋತ್ರಗಳು, ಜಾನಪದ ನೃತ್ಯ, ನಾಟಕ, ಸಂಗೀತ, ಕ್ರೀಡೆ, ರಂಗ ತರಬೇತಿ, ಜಾದುಕಲೆ, ಪ್ರಕೃತಿ ಶಿಬಿರ ಹಾಗೂ ಗಾಳಿಪಟ ಉತ್ಸವ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಿದ್ದು ಶಿಬಿರದ 10 ದಿನವೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿರುತ್ತದೆ. ಆಸಕ್ತರು ಸುಧಾಕರ ಪಿ. ಬೈಂದೂರು ಅವರನ್ನು  ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com