ಮಾತೃಭಾಷೆಯಲ್ಲಿ ಕಲಿಕೆ ಸಂತಸದಾಯಕ: ಗಂಗಾವತಿ ಪ್ರಾಣೇಶ್



ಕುಂದಾಪುರ: ಸರ್ವ ಶಿಕ್ಷಾ ಆಭಿಯಾನ, ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರು, ಕಲಿ-ಕಲಿಸು ಮಾದರಿ ಕ್ಲಸ್ಟರ್, ಮಾದರಿ ಶಾಲೆ ಯೋಜನೆ 2012-13, ಮಾಡೆಲ್ ಸ್ಕೂಲ್ ಇನಿಶಿಯೇಟಿವ್ ಕಾರ್ಯಕ್ರಮದನ್ವಯ ಕಲಾ ಶೈಕ್ಷಣಿಕ ಸಮ್ಮೇಳನದ ಸಮಾರೋಪ ಸಮಾರಂಭ.ಸ.ಮಾ.ಹಿ.ಪ್ರಾ ಶಾಲೆ ತಲ್ಲೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ.ಟಿ.ಬಿ ಶೆಟ್ಟಿ ವಕೀಲರು ಕುಂದಾಪುರ ಇವರು ವಹಿಸಿದ್ದರು. ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಂಗಾವತಿ ಪ್ರಾಣೇಶ್ ಮಾತನಾಡಿ ಮಾತೃಭಾಷೆಯ ಕಲಿಕೆ ಸಂತಸದಾಯಕವಾಗಿದ್ದು ಶಾಲಾ ಪರಿಸರ ಆಕರ್ಷಕವಾಗಿದ್ದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿರಬೇಕು ಎಂದರು.
 ಮುಖ್ಯ ಅತಿಥಿಗಳಾಗಿ ಸುಪ್ರೀಂ ಟೈಲ್ಸ್ ತಲ್ಲೂರು ಜಯಕರ ಶೆಟ್ಟಿ, ಜಂಟಿ ವ್ಯವಸ್ಥಾಪಕ ನಿರ್ದೇಶಕರು ಮಂಗಳೂರು ಟೈಲ್ಸ್ ಲಿಮಿಟೆಡ್ ಕುಂದಾಪುರ ಸಚಿನ್ ನಕ್ಕತ್ತಾಯ ಕೆ., ರಂಗ ತಜ್ಞರು ಸಾಗರ ಪುರುಷೋತ್ತಮ ತಲವಾಟ, ಆಹಾರ ವಿಜ್ಞಾನಿಗಳು ಹಾಗೂ ಮಧುಮೇಹ & ಹೃದಯ ರೋಗ ತಜ್ಞರು ಡಾ.ಪ್ರವೀಣ ಜೇಕಬ್  (ಅಮೇರಿಕಾ),  ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಡಾ.ವೆಂಕಟರಮಣ ಹೆಗಡೆ,  ಕಲಾವಿದರ ಒಕ್ಕೂಟ ಬೆಂಗಳೂರು ಅಧ್ಯಕ್ಷರು  ಕೆಂಚನೂರು ಶಂಕರ್, ಕರ್ನಾಟಕ ರಾಜ್ಯ ನೌಕರರ ಸಂಘ ಕುಂದಾಪುರ ಅಧ್ಯಕ್ಷ  ದಿನಕರ ಶೆಟ್ಟಿ ,  ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ತಲ್ಲೂರಿನ ವಿವೇಕ್ ಗೋಪಾಲಕೃಷ್ಣ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ.ಶಾಲೆ ಉಪ್ಪಿನಕುದ್ರು,  ರೋಟರಿ ಕ್ಲಬ್ ಬೈಂದೂರು ಅಧ್ಯಕ್ಷ  ಗೋವಿಂದ  ಉಪಸ್ಥಿತರಿದ್ದರು. 


  ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ವಲಯದ ಅಧ್ಯಕ್ಷ ಮಹಾದೇವ ಮಂಜ ಇವರು  ಸ್ಮರಣ ಸಂಚಿಕೆ ಮುಖಪುಟ ಆನಾವರಣಗೊಳಿಸಿದರು.
  ಕಲಾ ಶಿಕ್ಷಣ ವಿಭಾಗ ಇಂಡಿಯನ್ ಪೌಂಡೇಶನ್ ಫಾರ್ ಆರ್ಟ್ಸ್ ಬೆಂಗಳೂರು ಇದರ ಅಧಿಕಾರಿ ಶ್ರೀಮತಿ ಅನುಪಮಾ ಪ್ರಕಾಶ್ ಕಾರ್ಯಕ್ರಮ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕರಾದ  ಶಂಕರ್ ಸ್ವಾಗತಿಸಿದರು ಸಮ್ಮೇಳನದ ಸಂಯೋಜಕರಾದ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಚಂದ್ರಕಾಂತ ಧನ್ಯವಾದ ಸಲ್ಲಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com