ಕಲಾ ಸಾಂಸ್ಕ್ರತಿಕ ಸಂಜೆ

ತಲ್ಲೂರು: ಸರ್ವ ಶಿಕ್ಷಾ ಆಭಿಯಾನ, ಇಂಡಿಯನ್ ಫೌಂಡೇಶನ್ ಫಾರ್ ಆರ್ಟ್ಸ್,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಸಮೂಹ ಸಂಪನ್ಮೂಲ ಕೇಂದ್ರ ತಲ್ಲೂರು, ಕಲಿ-ಕಲಿಸು ಮಾದರಿ ಕ್ಲಸ್ಟರ್, ಮಾದರಿ ಶಾಲೆ ಯೋಜನೆ 2012-13, ಮಾಡೆಲ್ ಸ್ಕೂಲ್ ಇನಿಶಿಯೇಟಿವ್ ಕಾರ್ಯಕ್ರಮದನ್ವಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತಲ್ಲೂರು ಇಲ್ಲಿ ನಡೆದ ಕಲಾ ಶೈಕ್ಷಣಿಕ ಸಮ್ಮೇಳನದ ಕಲಾ ಸಾಂಸ್ಕ್ರತಿಕ ಸಂಜೆಯ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾರಾಯಣ ಶೆಟ್ಟಿ ಮೆಲ್ಮನೆ ಜನನಿ ತಲ್ಲೂರು ಇವರು ವಹಿಸಿದ್ದರು.
   ಮುಖ್ಯ ಅತಿಥಿಗಳಾಗಿ ಖ್ಯಾತ ವಕೀಲರಾದ  ಎ,ಎಸ್.ಎನ್.ಹೆಬ್ಬಾರ್, ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಮುಖ್ತೇಸರರು ವಸಂತ ಆರ್ ಹೆಗಡೆ,  ಪ್ರಶಸ್ತಿ ಪುರಸ್ಕ್ರತ ಕೃಷಿಕ ಕೆಂಚನೂರು ಸೋಮಶೇಖರ ಶೆಟ್ಟಿ,  ತಲ್ಲೂರು ರಿಕ್ಷಾ ಯೂನಿಯನ್ ಅಧ್ಯಕ್ಷ ಶೇಖರ್ ಪೂಜಾರಿ ತಲ್ಲೂರು,  ದಲಿತ ಸಂಘರ್ಷ ಸಮಿತಿ  ರಾಜ್ಯ ಸಂಘಟನಾ ಸಂಚಾಲಕ ಉದಯ್ ಕುಮಾರ ತಲ್ಲೂರು, ಶಶಿಧರ ಶೆಟ್ಟಿ ಅಧ್ಯಕ್ಷರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಡುಪಿ ಜಿಲ್ಲೆ,  ಶೇಖರ ಮೋಗೇರಿ ಪ್ರತಿನಿಧಿ ಕರ್ನಾಟಕ ರಾಜ್ಯ ನೌಕರರ ಸಂಘ ಕುಂದಾಪುರ ತಾಲೂಕು, ಟಿ.ಕೆ.ಕೋಟ್ಯಾನ್. ಅಧ್ಯಕ್ಷರು ಹಾಲು ಉತ್ಪಾದಕರ ಸಂಘ ತಲ್ಲೂರು,  ಶೇಖರ ಶೆಟ್ಟಿ ಕೆ ಉದ್ಯಮಿಗಳು ತಲ್ಲೂರು, ಪ್ರಭಾಕರ್ ಆಚಾರ್ಯ ತಲ್ಲೂರು, ನಾಗೇಶ ಭಂಡಾರಿ ಅಧ್ಯಕ್ಷರು ಶಾಲಾಭಿವೃಧ್ಧಿ ಸಮಿತಿ ತಲ್ಲೂರು ಉಪಸ್ಥಿತರಿದ್ದರು.ಸಮೂಹ ಸಂಪನ್ಮೂಲ ಕೇಂದ್ರದ ಹಿರಿಯ ಶಿಕ್ಷಕರಾದ  ಮಂಜು ಶೆಟ್ಟಿ. ಮುಖ್ಯೋಪಾಧ್ಯಯರು. ಸ ಹಿ ಪ್ರಾ ಶಾಲೆ ಕನ್ಯಾನ.  ಶ್ರೀಮತಿ ಜಯಮ್ಮ ಸ.ಶಿ. ಸ ಹಿ ಪ್ರಾ ಶಾಲೆ. ತಲ್ಲೂರು. ಇವರನ್ನುಸನ್ಮಾನಿಸಲಾಯಿತು.ಸಮ್ಮೇಳನದ ಸಂಯೋಜಕರಾದ ಗಣಪತಿ ಹೋಬಳಿದಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯಶಿಕ್ಷಕರಾದ  ಶಂಕರ್ ಸ್ವಾಗತಿಸಿದರು.ಶಿಕ್ಷಕರಾದ ಚಂದ್ರಕಾಂತ ಕಾರ್ಯಕ್ರಮ ನಿರೂಪಿಸಿದರು. ಉದಯ ಭಂಡಾರ್ಕರ್, ಮುಖ್ಯೋಪಾಧ್ಯಾಯರು ಸಬ್ಲಾಡಿ ಧನ್ಯವಾದ ಸಲ್ಲಿಸಿದರು. ಸ.ಹಿ.ಪ್ರಾ ಶಾಲೆ ತಲ್ಲೂರು ಇಲ್ಲಿಯ ವಿದ್ಯಾರ್ಥಿಗಳಿಂದ ಯಕ್ಷಗಾನ ನಡೆಯಿತು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com