ಕಲಬೆರೆಕೆ ಇಲ್ಲದ ಅಚ್ಚ ಕನ್ನಡದ ಕಲೆ ಯಕ್ಷಗಾನ: ಯು. ಲಕ್ಷ್ಮಿನಾರಾಯಣ ವೈದ್ಯ

ತೆಕ್ಕಟ್ಟೆ: ಮಹಾಭಾರತ, ರಾಮಾಯಣದ ಕತೆಗಳನ್ನು ಆಡಿತೋರಿಸುವ ಮೂಲಕ ಭಾರತೀಯ ಕೌಟುಂಬಿಕ ಸಾಮರಸ್ಯವನ್ನು ಇಂದಿನ ಸಮಾಜಕ್ಕೆ ತಿಳಿಸುವ ಕಲೆಯಾಗಿದೆ ಯಕ್ಷಗಾನ, ಯಕ್ಷಗಾನದ ರಂಗಸ್ಥಳದಲ್ಲಿ ವನವಾಸದಲ್ಲಿರುವ ರಾಮ-ಲಕ್ಷ್ಮಣರು ರಾಜ ವೇಷದಲ್ಲಿಯೇ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ವನವಾಸದಲ್ಲಿರುವುದನ್ನು ಪಾತ್ರಧಾರಿಯ ಮಾತಿನಲ್ಲಿ ಪ್ರೇಕ್ಷಕರು ಗ್ರಹಿಸುತ್ತಾರೆ. ಇದು ಯಕ್ಷಗಾನದ ವೈಶಿಷ್ಟé. ಅಲ್ಲದೇ ಯಾವುದೇ ಕಲಬೆರೆಕೆ ಇಲ್ಲದೇ ಅಚ್ಚ ಕನ್ನಡದಲ್ಲಿ ಉಳಿದಿದ್ರೆ ಅದು ಯಕ್ಷಗಾನ ಕಲೆ. ನಮ್ಮ ಭಾರತೀಯ ಸಂಸ್ಕೃತಿ ಉಳಿದಿದ್ರೆ ಯಕ್ಷಗಾನದಿಂದ ಮಾತ್ರ ಎಂದು ಕುಂದಾಪುರದ ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಮಾಜಿ ಅಧ್ಯಕ್ಷ ಯು. ಲಕ್ಷ್ಮಿನಾರಾಯಣ ವೈದ್ಯ ಹೇಳಿದರು.

ಅವರು  ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ, ಕೊಮೆ, ಇವರ ಸಾಂಸ್ಕೃತಿಕ ಪರ್ವದ ಉದ್ಘಾಟನೆ ಮತ್ತು ಡಾ| ಪ್ರೀತಿ ಕೆ.ಮೋಹನ್‌ರ 'ವಾಲಿಸಮರ' ಯಕ್ಷಗಾನದ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ ಹೇಳಿದರು.

ರೋಟರಿ ಅಧ್ಯಕ್ಷ ಶಂಕರ ದೇವಾಡಿಗ, ಭಾಗವತ ಲಂಬೋದರ ಹೆಗಡೆ, ಸೀತಾರಾಮ ಶೆಟ್ಟಿ ಮಲ್ಯಾಡಿಯವರು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಅಂಚೆ ವಿತರಕ ಮಂಜುನಾಥ ಆಚಾರ್‌ ಅವರನ್ನು ಸಮ್ಮಾನಿಸಲಾಯಿತು.ಯಕ್ಷಗುರುಗಳಾದ ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ವೆಂಕಟೇಶ ವೈದ್ಯ ಸಮ್ಮಾನಿತರ ಪರಿಚಯ ಮಾಡಿದರು. ಕಾರ್ಯಕ್ರಮವನ್ನು ಹೆರಿಯಮಾಸ್ತರ್‌ ನಿರ್ವಹಿಸಿದರು. ನಂತರ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ಡಾ| ಪ್ರೀತಿ. ಕೆ. ಮೋಹನ್‌ ಸಂಯೋಜನೆಯಲ್ಲಿ 'ವಾಲಿಸಮರ' ಯಕ್ಷಗಾನ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com