ಸಾಂಸ್ಕೃತಿಕ ಪರ್ವ, ಯಕ್ಷಗಾನ ಪ್ರದರ್ಶನ ಉದ್ಘಾಟನೆ

ಕುಂದಾಪುರ: ಮಹಾಭಾರತ, ರಾಮಾಯಣದ ಕತೆಗಳನ್ನು ಆಡಿ ತೋರಿಸುವ ಮೂಲಕ ಭಾರತೀಯ ಕೌಟುಂಬಿಕ ಸಾಮರಸ್ಯವನ್ನು ಇಂದಿನ ಸಮಾಜಕ್ಕೆ ತಿಳಿಸುವ ಮಾಧ್ಯಮವಾಗಿ ಯಕ್ಷಗಾನ ದೊಡ್ಡ ಪ್ರಭಾವ ಬೀರಿದೆ. ಯಾವುದೇ ಕಲಬೆರೆಕೆ ಇಲ್ಲದೇ ಅಚ್ಚ ಕನ್ನಡದಲ್ಲಿ ಉಳಿದಿರುವ ಕಲೆಯೊಂದಿದ್ದರೆ ಅದು ಯಕ್ಷಗಾನ ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಮಾಜಿ ಅಧ್ಯಕ್ಷ ಯು. ಲಕ್ಷ್ಮೀನಾರಾಯಣ ವೈದ್ಯ ಹೇಳಿದರು. 
    ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಯಶಸ್ವಿ ಕಲಾವೃಂದ ಕೊಮೆ ವತಿಯಿಂದ ಜರುಗಿದ ಸಾಂಸ್ಕೃತಿಕ ಪರ್ವ ಮತ್ತು ಡಾ. ಪ್ರೀತಿ ಕೆ. ಮೋಹನ್ ಸಂಯೋಜಿತ ವಾಲಿ ಸಮರ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. 

ರೋಟರಿ ಕ್ಲಬ್ ಅಧ್ಯಕ್ಷ ಶಂಕರ ದೇವಾಡಿಗ, ಭಾಗವತ ಲಂಬೋದರ ಹೆಗಡೆ, ಸೀತಾರಾಮ ಶೆಟ್ಟಿ ಮಲ್ಯಾಡಿ ಶುಭ ಹಾರೈಸಿದರು. ಯಕ್ಷಗುರು ಸೀತಾರಾಮ ಶೆಟ್ಟಿ ಸ್ವಾಗತಿಸಿದರು. ಹೆರಿಯ ಮಾಸ್ತರ್ ಕಾರ್ಯಕ್ರಮ ನಿರ್ವಹಿಸಿದರು. 

ನಂತರ ಕೇಂದ್ರ ಸಂಸ್ಕೃತಿ ಇಲಾಖೆಯ ಸಹಕಾರದಿಂದ ಡಾ. ಪ್ರೀತಿ ಕೆ. ಮೋಹನ್ ಸಂಯೋಜನೆಯಲ್ಲಿ ವಾಲಿ ಸಮರ ಯಕ್ಷಗಾನ ಪ್ರದರ್ಶನ ನಡೆಯಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com