‘ಬದ್ಕ್’ ತುಳು ಕಿರುಚಿತ್ರ ಬಿಡುಗಡೆ

ಕಟಪಾಡಿ: ಕುಡಿತ ಹಾಗೂ ಜೂಜಾಟಕ್ಕೆ ಬಲಿಯಾದಲ್ಲಿ ಯುವಜನರ ಜೀವನ ಸರ್ವನಾಶವಾಗುತ್ತದೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ನೈಜವಾಗಿ ಚಿತ್ರಿಸುವ ಮೂಲಕ 'ಬದ್ಕ್' ಕಿರುಚಿತ್ರ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ಸಾಮಾಜಿಕ ಸಮಸ್ಯೆಯಾದ ಮೂಢನಂಬಿಕೆಯ ವಿರುದ್ಧ ಬೆಳಕು ಚೆಲ್ಲುವ ಈ ಚಿತ್ರದ ಮೂಲಕ ಗ್ರಾಮೀಣ ಪ್ರತಿಭೆಗಳ ಚೊಚ್ಚಲ ಪ್ರಯತ್ನ ಫಲಪ್ರದವಾಗಿರುವುದು ಶ್ಲಾಘನೀಯ ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ರೆ.ಫಾ. ಜೊಸ್ವಿ ಫರ್ನಾಂಡಿಸ್ ಹೇಳಿದರು. 

ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮೂಡುಬೆಳ್ಳೆ ಕೆ.ಕೆ. ಪ್ರೊಡಕ್ಷನ್ಸ್ ನಿರ್ಮಿಸಿರುವ 'ಬದ್ಕ್' ತುಳು ಕಿರುಚಿತ್ರದ ಬಿಡುಗಡೆ ಹಾಗೂ ಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 

ಯುನಿಸೆಫ್-ಪ್ರಸಾರ ಭಾರತಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ ಚಿತ್ರದ ಬಿಡುಗಡೆ ಮಾಡಿ, ಆಧುನಿಕತೆಯ ಸೋಗಿನಲ್ಲಿ ಐಷಾರಾಮಿ ಜೀವನಕ್ಕಾಗಿ ತ್ವರಿತ ಹಣ ಗಳಿಸುವ ಉದ್ದೇಶದಿಂದ ದಾರಿ ತಪ್ಪುತ್ತಿರುವ ಯುವಕರು ತಮ್ಮತನವನ್ನು ಕಳೆದುಕೊಳ್ಳುತ್ತಿರುವುದು ದುರಂತ ಎಂಬುದನ್ನು 'ಬದ್ಕ್' ಚಿತ್ರ ಮಾರ್ಮಿಕವಾಗಿ ತೋರಿಸಿಕೊಟ್ಟಿದೆ ಎಂದರು. 

ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ರೆ.ಫಾ. ಪೌಲ್ ಸಿಕ್ವೇರ, ಜಿಪಂ ಸದಸ್ಯೆ ಐಡಾ ಗಿಬ್ಬ ಡಿಸೋಜ, ತಾಪಂ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್, ಬೆಳ್ಳೆ ಗ್ರಾಪಂ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಭಾಗವಹಿಸಿದ್ದರು. 

ಚಿತ್ರದ ಛಾಯಾಗ್ರಾಹಕ ಜೇಸನ್ ಡಿಸೋಜ ಉಡುಪಿ, ಸಂಕಲನಕಾರ ಸಂದೀಪ್ ಉಡುಪಿ, ಸಹ ನಿರ್ದೇಶಕಿ ಗೀತಾ ನಾಕ್, ಕಲಾವಿದರಾದ ಸವಿತಾ ಸಾಲ್ಯಾನ್ ಕರ್ಜೆ, ಅಶೋಕ್ ಮೂಡುಬೆಳ್ಳೆ, ಬೇಬಿ ಎವರೆಲ್ ರಿಯಾ ಆಲ್ವ, ನೀತಾ ಸುವರ್ಣ ಮಂಗಳೂರು, ಸಂಜೀವ ಸುವರ್ಣ ಕಟಪಾಡಿ, ಲೀಲಾಧರ್ ಕಾಮತ್, ಹೆರಾಲ್ಡ್ ವಿಲ್ಸನ್ ಮಾರ್ಟಿಸ್, ಐವನ್ ದಲ್ಮೇದಾ, ಶ್ರೀಧರ್ ಶೆಟ್ಟಿಗಾರ್ ಸತೀಶ್ ಕುಮಾರ್, ಪ್ರಶಾಂತ್ ಬೆನಾಲ್, ರವಿ ಪೂಜಾರಿ ಮೂಡುಬೆಳ್ಳೆ, ಕರುಣಾಕರ ಶೆಟ್ಟಿ ಮೂಡುಬೆಳ್ಳೆ, ಸಚ್ಚು ಮೂಡುಬೆಳ್ಳೆ, ಶರತ್ ಬೈಲೂರು ಉಪಸ್ಥಿತರಿದ್ದರು. 

ಬಳಿಕ ನಡೆದ ಚಿತ್ರದ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪುಂಡಲೀಕ ಮರಾಠೆ, ಜ್ಞಾನಗಂಗಾ ಪಿಯು ಕಾಲೇಜಿನ ಪ್ರಿನ್ಸಿಪಾಲ್ ವಿ.ಎಲ್. ಭಟ್ ಎ.ಜಿ. ಡಿಸೋಜ ಪಾಲ್ಗೊಂಡರು. ಚಿತ್ರದ ನಿರ್ಮಾಪಕ ಅನಿಲ್ ಆಲ್ವ ಮೂಡುಬೆಳ್ಳೆ ಸ್ವಾಗತಿಸಿದರು. ನಿರ್ದೇಶಕ ಕಲಾವೈಖರಿ ಪ್ರಭಾಕರ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ಮೀರಾ ಲೋಬೋ ಕಾರ್ಯಕ್ರಮ ನಿರೂಪಿಸಿದರು. ಕಲಾವಿದ ಶ್ರೀಧರ್ ಶೆಟ್ಟಿಗಾರ್ ವಂದಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com