ವಿದೇಶಿ ಟ್ರಾಲರ್‌ಗಳಿಂದ ಮತ್ಸ್ಯ ಸಂಪತ್ತಿನ ಲೂಟಿ: ಯಶ್‌ಪಾಲ್

ಉಡುಪಿ: ಕೇಂದ್ರದ ಯುಪಿಎ ಸರಕಾರ ವಿದೇಶಿ ಟ್ರಾಲರ್‌ಗಳಿಗೆ ನೀಡಿದ ಅನುಮತಿಯಿಂದಾಗಿ ಮತ್ಸ್ಯ ಸಂಪತ್ತು ಲೂಟಿಯಾಗುತ್ತಿದೆ ಎಂದು ರಾಜ್ಯ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಗ್ಯಾಟ್ ಒಪ್ಪಂದದಂತೆ ವಿದೇಶಿ ಟ್ರಾಲರ್‌ಗಳಿಗೆ ಪಿ.ವಿ. ನರಸಿಂಹ ರಾವ್ ಸರಕಾರ ನೀಡಿದ ಅನುಮತಿಯನ್ನು ವಾಜಪೇಯಿ ಸರಕಾರ ರದ್ದು ಮಾಡಿತ್ತು ಎಂದರು. 

ಆದರೆ ಯುಪಿಎ ಸರಕಾರ ಮತ್ತೆ ಅನುಮತಿ ನೀಡಿದ್ದು ವಿದೇಶಿ ಟ್ರಾಲರ್‌ಗಳಿಗಿದ್ದ 24 ನಾಟಿಕಲ್ ಮೈಲ್ ವ್ಯಾಪ್ತಿಯ ನಿರ್ಬಂಧವನ್ನು 12 ನಾಟಿಕಲ್ ಮೈಲ್‌ಗಿಳಿಸಲಾಗಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದರೆ ವಿದೇಶಿ ಟ್ರಾಲರ್‌ಗಳಿಗೆ ಅನುಮತಿ ರದ್ದಾಗಲಿದೆ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com