ಎ. 18-20 ಮಣಿಪಾಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯದ ಸ್ಕೂಲ್‌ ಆಫ್ ಕಮ್ಯುನಿಕೇಶನ್‌ (ಎಸ್‌ಒಸಿ) ವತಿಯಿಂದ 'ಮಣಿಪಾಲ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' ಎ. 18, 19 ಮತ್ತು 20ರಂದು ಮಣಿಪಾಲದಲ್ಲಿ ಜರಗಲಿದೆ.

ಬಂಗಾಲಿ, ಮರಾಠಿ, ಮಲಯಾಳ, ಕನ್ನಡ ಭಾಷೆಗಳ ಚಲನಚಿತ್ರಗಳಲ್ಲದೆ ಬಾಲಿವುಡ್‌ ಚಿತ್ರಗಳು, ಸಿಂಗಾಪುರ, ಅರ್ಜೆಂಟೀನಾ, ಫ್ರಾನ್ಸ್‌, ಜರ್ಮನಿ, ಸೌದಿ ಅರೇಬಿಯಾ, ಇರಾನ್‌, ಬೆಲ್ಜಿಯಂ, ಪೋಲೆಂಡ್‌ ಮತ್ತು ಚೀನ ದೇಶಗಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಎಸ್‌ಒಸಿ ನಿರ್ದೇಶಕ ವರದೇಶ ಹಿರೇಗಂಗೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಎ. 18ರಂದು ಬೆಳಗ್ಗೆ 9.15ಕ್ಕೆ ಮಣಿಪಾಲದ ಐನಾಕ್ಸ್‌ ಚಿತ್ರಮಂದಿರದಲ್ಲಿ ಆರಂಭಗೊಳ್ಳಲಿದೆ. ನಿರ್ದೇಶಕ ಗಿರೀಶ್‌ ಕಾರ್ನಾಡ್‌ ಉದ್ಘಾಟಿಸಲಿದ್ದಾರೆ. ಮರಾಠಿ ಸಿನೆಮಾ ನಿರ್ದೇಶಕ ಸುಮಿತ್ರಾ ಭಾವೆ, ಚಿತ್ರ ವಿಮರ್ಶಕ ಎನ್‌. ಮನು ಚಕ್ರವರ್ತಿ, ಚಲನಚಿತ್ರ ನಿರ್ದೇಶಕ ಸುನಿಲ್‌ ಸುಕ್ತಾನ್‌ಕರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಚಿತ್ರ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರುತ್ತದೆ. ಐನಾಕ್ಸ್‌ ಸೆಂಟ್ರಲ್‌ ಸಿನೆಮಾಸ್‌, ಎಂಐಟಿ ಸೆಮಿನಾರ್‌ ಹಾಲ್‌, ಹಂಪಿ ಆಡಿಟೋರಿಯಂ, ಟಿಎಂಎ ಪೈ ಪ್ಲಾನೆಟೋರಿಯಂಗಳಲ್ಲಿ ಚಿತ್ರಪ್ರದರ್ಶನಗೊಳ್ಳಲಿವೆ.

ಲೂಸಿಯಾ, ಉಳಿದವರು ಕಂಡಂತೆ, ಎ ರೈನಿ ಡೇ (ಮರಾಠಿ), ಸಂಹಿತಾ (ಮರಾಠಿ), ಜಟ್ಟಾ (ಕನ್ನಡ), ಚಿತ್ರಾಂಗಧ (ಬಂಗಾಲಿ), ದಿ ಜರ್ಮನ್‌ ಡಾಕ್ಟರ್‌ (ಅರ್ಜೆಂಟೀನಾ-ಲ್ಯಾಟಿನ್‌ ಅಮೆರಿಕ), ಕೂರ್ಮಾವತಾರ (ಕನ್ನಡ), ಶಿಕಾರಿ (ಮಲಯಾಳ), ಮೈ ಸ್ವೀಟ್‌ ಪೆಪ್ಪರ್‌ ಲ್ಯಾಂಡ್‌ (ಫ್ರಾನ್ಸ್‌-ಜರ್ಮನಿ), ಸಿಟಿ ಲೈಟ್ಸ್‌, ಬ್ಲೂ ಈಸ್‌ದಿ ವಾರ್ಮೆಸ್ಟ್‌ ಕಲರ್‌ (ಫ್ರೆಂಚ್‌), ಹೋಲಿ ಮೋಟರ್ (ಚೈನೀಸ್‌, ಫ್ರೆಂಚ್‌, ಇಂಗ್ಲಿಷ್‌), ವಾನಪ್ರಸ್ಥಂ (ಮಲಯಾಳ), ಅಸ್ತು (ಮರಾಠಿ) ಮೊದಲಾದ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದವರು ತಿಳಿಸಿದರು.

ಉಡುಪಿ ಚಿತ್ರಸಮಾಜದ ಕೆ. ಫ‌ಣಿರಾಜ್‌, ಎಸ್‌ಒಸಿಯ ರವಿರಾಜ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com