ಪಂಕ್ತಿ ಭೇದ ಮರುಕಳಿಸಿದರೆ ಉಗ್ರ ಹೋರಾಟ: ದಿನಕರ ಶೆಟ್ಟಿ

ಉಡುಪಿ: ಶ್ರೀಕೃಷ್ಣ ಮಠದ ಭೋಜನ ಶಾಲೆಯಲ್ಲಿ ಉಪನ್ಯಾಸಕಿ ವನಿತಾ ಶೆಟ್ಟಿ ಅವರಿಗಾದ ಪಂಕ್ತಿ ಭೇದದ ಅವಮಾನಕರ ಘಟನೆಗೆ ಸಂಬಂಧಿತರು ಕ್ಷಮೆ ಯಾಚಿಸಬೇಕು ಎಂದು ಉಡುಪಿ ಜಿಲ್ಲಾ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಕುರ್ಕಾಲು ಒತ್ತಾಯಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಘಟನೆ ಮರುಕಳಿಸಿದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು. ಮಠಕ್ಕೆ ತೆರಳದಂತೆ, ದೇಣಿಗೆ ನೀಡದಂತೆ ಬಂಟ ಸಮುದಾಯಕ್ಕೆ ಮನವಿ ಮಾಡಲಾಗುವುದು ಎಂದರು. 

ಘಟನೆಗೆ ಸಂಬಂಧಿಸಿ ಸೂಕ್ತವಾಗಿ ಸ್ಪಂದಿಸದಿದ್ದರೆ ಬಂಟ ಸಮುದಾಯದ ಮಠಗಳ ಮೂಲಕ ಶಿಷ್ಯರನ್ನು ತಯಾರಿಸಿ ಪೂಜೆ, ಪುನಸ್ಕಾರಗಳಿಗೆ ನಿಯೋಜಿಸಲಾಗುವುದು. ಸಾರ್ವಜನಿಕ ಸ್ಥಳವಾದ ಶ್ರೀಕೃಷ್ಣ ಮಠದ ಖಾಸಗೀಕರಣವಾಗಬೇಕು. ಬಂಟ ಸಮುದಾಯದ ಆಡಳಿತವಿರುವ ದೇವಳಗಳಲ್ಲೂ ಯಾವುದೇ ಪಂಕ್ತಿ ಭೇದ ಸಲ್ಲದು. ನಾನಾ ಸಮುದಾಯದ ಜನತೆ ನೀಡುವ ಗೌರವವನ್ನು ದೌರ್ಬಲ್ಯವೆಂದು ತಿಳಿಯದೆ, ಸವಾರಿ ಮಾಡದೆ, ಸಮಾನತೆ ತೋರಬೇಕು ಎಂದರು. 

ಸುದ್ದಿಗೋಷ್ಠಿಯಲ್ಲಿ ರಾಧಾಕೃಷ್ಣ ಶೆಟ್ಟಿ, ದಿಲೇಶ್ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಇನ್ನಾ ಉದಯ್ ಶೆಟ್ಟಿ, ಶಶಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ಬೆಳ್ಳೆ ಗೋಪಾಲ್ ಶೆಟ್ಟಿ, ಹೇಮನಾಥ್ ಹೆಗ್ಡೆ ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com