ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ

ಉಡುಪಿ: ಕರಾವಳಿಯ ಮೀನುಗಾರರ ಯುವ ನೇತಾರ ಯಶಪಾಲ್‌ ಎ. ಸುವರ್ಣ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಪೆಢರೇಶನ್‌ನ ಅಧ್ಯಕ್ಷರಾಗಿ ಮತ್ತು ಪುರುಷೋತ್ತಮ್‌ ಅಮೀನ್‌ ಉಪಾಧ್ಯಕ್ಷರಾಗಿ ತೃತೀಯ ಬಾರಿಗೆ ಆಯ್ಕೆಯಾಗಿದ್ದಾರೆ.

60 ವಸಂತಗಳನ್ನು ಕಳೆದು ಪ್ರಸ್ತುತ ವಜ್ರಮಹೋತ್ಸವ ಆಚರಿಸಲು ಅಣಿಯಾಗಿರುವ ಪೆಢರೇಶನ್‌ಗೆ ತೃತೀಯ ಬಾರಿಗೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಇಬ್ಬರು ನಾಯಕರು ಆಯ್ಕೆಯಾಗಿರುವುದು 2009ರಿಂದ 2014ರ ವರೆಗೆ ಆದ ಪ್ರಗತಿಗೆ ಸಂದ ಒಂದು ದೊಡ್ಡ ಪುರಸ್ಕಾರವಾಗಿರುತ್ತದೆ ಎಂದು ಪೆಢರೇಶನ್‌ ತಿಳಿಸಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು 1954ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಹಕಾರ ರಂಗದ ಮೀನುಗಾರಿಕಾ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ಮೀನುಗಾರರಿಗೆ ಆಸರೆಯನ್ನು ನೀಡಬೇಕಾಗಿತ್ತು. ಆದರೆ ಹಲವಾರು ಕಾರಣಗಳಿಂದ ನಿರೀಕ್ಷಿತ ಮಟ್ಟವನ್ನು ತಲುಪುವಲ್ಲಿ ವೈಫ‌ಲ್ಯ ಅನುಭವಿಸಬೇಕಾಯಿತು. ಕಾಲ ಕಾಲಕ್ಕೆ ಸರಿಯಾಗಿ ರಾಜ್ಯ ಸರಕಾರವು ಮಧ್ಯಪ್ರವೇಶಿಸಿ ಸಹಕಾರವನ್ನು ನೀಡಿ ಸಂಸ್ಥೆಯ ಅಸ್ತಿತ್ವಕ್ಕೆ ತೊಂದರೆಯಾಗದಂತೆ ನೋಡಿಕೊಂಡಿತು.

ವೈಯಕ್ತಿಕ ವರ್ಚಸ್ಸು

ಯುವಕ ಯಶಪಾಲ್‌ ಸುವರ್ಣರು 2009ರಲ್ಲಿ ಫೆಡರೇಶನ್‌ನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರದಿಂದ ತನ್ನ ವೈಯಕ್ತಿಕ ವರ್ಚಸ್ಸನ್ನು ಬಳಸಿ ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸೆಲ್‌ ಮಾರಾಟ, ಮೀನುಗಾರಿಕಾ ಸಲಕರಣೆಗಳ ಮಾರಾಟ, ಮಂಜುಗಡ್ಡೆ ಮಾರಾಟ, ಮುಂತಾದವುಗಳನ್ನು ಅಭಿವೃದ್ಧಿಪಡಿಸಿದರು. ಸ್ವಯಂ ವರ್ಚಸ್ಸಿನಿಂದ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಸಂಸ್ಥೆಯ ಮುಖಾಂತರ ಅನುಷ್ಠಾನಗೊಳಿಸಿ 46 ಕೋಟಿ ರೂ.ಗಳಷ್ಟಿದ್ದ ಸಂಸ್ಥೆಯ ವ್ಯವಹಾರವನ್ನು 2012-13ರ ಸಾಲಿಗೆ ರೂ. 120 ಕೋಟಿ ರೂ.ಗೆ ಕೊಂಡೊಯ್ದರು.

ಪ್ರತಿಷ್ಠಿತ ಪ್ರಶಸ್ತಿಗಳು

ಸಂಸ್ಥೆ 2009-10ರಲ್ಲಿ ರೂ. 2.03 ಕೋಟಿ, 2010-11ರಲ್ಲಿ ರೂ. 1.04 ಕೋಟಿ, 2011-12ರಲ್ಲಿ ರೂ. 2.48 ಕೋಟಿ, 2012-13ರಲ್ಲಿ ರೂ. 2.14 ಕೋಟಿ ಲಾಭ ಗಳಿಸಿತು. ಮೇ/ ಇಂಡಿಯನ್‌ ಆಯಿಲ್‌ ಕಂಪೆನಿಯಿಂದ ಮತ್ತು ಕೇಂದ್ರ ಸರಕಾರದ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಬಂದವು. ಸಂಸ್ಥೆಯ ಸಿಬಂದಿಗಳ ಕನಿಷ್ಠವಾಗಿದ್ದ ವೇತನವನ್ನು ಸರಕಾರಿ ವೇತನದ ಸಮಾನ ಮಟ್ಟಕ್ಕೆ ಏರಿಸಿದುದಲ್ಲದೆ ಸಿಬಂದಿಗಳಿಗೆ ಕಳೆದ 60 ವರ್ಷಗಳಲ್ಲಿ ಈವರೆಗೆ ನೀಡದ ಹಲವು ಸೌಲಬÂಗಳನ್ನು ನೀಡಿದ ಕೀರ್ತಿ ಯಶಪಾಲ್‌ ಸುವರ್ಣ ಮತ್ತು ಆಡಳಿತ ಮಂಡಳಿಗೆ ಸಲ್ಲುತ್ತದೆ.

ಮೀನುಗಾರಿಕಾ ಇಲಾಖೆಯ ಬಹುಜನರ ಆಪೇಕ್ಷಿತ ಯೋಜನೆಯಾದ ಶೇ. 2 ಬಡ್ಡಿ ದರದ ಸಾಲಯೋಜನೆಯನ್ನು ವಾಣಿಜ್ಯ ಬಾಂಕುಗಳ ಮುಖಾಂತರ ಪಡೆದುಕೊಳ್ಳಲು ಸಹಕರಿಸಿದುದರಿಂದಾಗಿ ಸುಮಾರು 50,000 ಮೀನುಗಾರರು ಈ ಯೋಜನೆಯ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ಕಲ್ಪಿಸಿಕೊಂಡಿರುತ್ತಾರೆ.

ಯಶಪಾಲ್‌ ಅವರು ಮಹಾಲಕ್ಷ್ಮೀ ಕೋ-ಆಪರೇಟಿವ್‌ ಬ್ಯಾಂಕಿನ ನಿರ್ದೇಶಕರಾಗಿ, ಉಡುಪಿ ನಗರಸಭಾ ಸದಸ್ಯರಾಗಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿಯಾಗಿ, ರಾಜ್ಯ ಬಿಜೆಪಿ ಯುವ ಮೋರ್ಚಾದ ಕಾರ್ಯದರ್ಶಿಯಾಗಿ, ಉಡುಪಿ ಜಿಲ್ಲಾ ಮಹಿಳಾ ಹಸಿಮೀನು ಮಾರಾಟಗಾರರ ಸಂಘದ ಸಲಹೆಗಾರರಾಗಿ ಹಾಗೂ ಅವಿಭಜಿತ ದ.ಕ. ಜಿಲ್ಲೆಯ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಎಲ್ಲ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com