ಪ್ರೊ| ವಿವೇಕ ರೈ ಅವರಿಗೆ ಬಾಬು ಅಮೀನ್‌ ಪ್ರಶಸ್ತಿ ಪದಾನ

ಉಡುಪಿ: ಕೆಮ್ಮಲಜೆ ಜಾನಪದ ಪ್ರಕಾಶನದ ವತಿಯಿಂದ ಕೊಡ ಮಾಡಲಾಗುವ 'ಬನ್ನಂಜೆ ಬಾಬು ಅಮೀನ್‌ ಜಾನಪದ ವಿದ್ವಾಂಸ ಪ್ರಶಸ್ತಿ'ಯನ್ನು ಈ ಬಾರಿ ಹಿರಿಯ ಜಾನಪದ ಸಂಶೋಧಕ 
ಪ್ರೊ|ಬಿ.ಎ.ವಿವೇಕ ರೈ ಅವರಿಗೆ ಹಾಗೂ 'ಜಾನಪದ ಕಲಾವಿದ ಪ್ರಶಸ್ತಿ'ಯನ್ನು ಮುದಿಪು ಕಲಾವಿದ ನಿಟ್ಟೂರು ಮಹಾಬಲ ಶೆಟ್ಟಿ ಅವರಿಗೆ ಪ್ರದಾನ ಮಾಡಲಾಯಿತು.
    ಉಡುಪಿಯ ಜಗನ್ನಾಥ ಸಭಾ ಭವನದಲ್ಲಿ ಜರಗಿದ ಸಮಾರಂಭದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
    ಕೆಮ್ಮಲಜೆ ಪ್ರಕಾಶನದ ಅಧ್ಯಕ್ಷ ಡಾ|ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ತುಳುಕೂಟದ ಗೌರವಾಧ್ಯಕ್ಷ ಡಾ|ಭಾಸ್ಕರನಾನಂದ ಕುಮಾರ್‌,ಉಗ್ಗೆಲ್‌ಬೆಟ್ಟು ಶ್ರೀ ಬ್ರಹ್ಮಬೈದೇರುಗಳು ಮತ್ತು ಚಿಕ್ಕಮ್ಮ ಗರೋಡಿಯ ಆಡಳಿತ ಸಮಿತಿ ಅಧ್ಯಕ್ಷ ಎ.ವಿಶ್ವನಾಥ ಸನಿಲ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
    ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ ಡಾ|ದುಗ್ಗಪ್ಪ ಕಜೆಕಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲಕೃಷ್ಣ ಕೊಡವೂರು ಕಾರ್ಯಕ್ರಮ ನಿರ್ವಹಿಸಿದರು. ಬೈದೇರುಗಳ ಅವಳಿ ಪಾತ್ರಿಗಳಾದ ಕೊಳಕೆ ಇರ್ವತ್ತೂರಿನ ಉಮೇಶ್‌ ಅಂಚನ್‌ ಮತ್ತು ರಮೇಶ್‌ ಅಂಚನ್‌ ಅವರನ್ನು ಸಮ್ಮಾನಿಸಲಾಯಿತು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com