ನ್ಯಾಯಾಲಯ ಸಿಬಂದಿ ಅನಧಿಕೃತ ಗೈರು: ನೋಟಿಸ್‌

ಉಡುಪಿ: ಉಡುಪಿಯ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪರಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜೇಗೌಡ ಹಾಗೂ ಕುಂದಾಪುರ ಪ್ರಧಾನ ಸಿವಿಲ್‌ ನ್ಯಾಯಾಧೀಶರು ಮತ್ತು ಪ್ರ.ದ.ನ್ಯಾ. ದಂಡಾಧಿಕಾರಿಯವರ ಕಚೇರಿಯಲ್ಲಿ ಜವಾನರಾಗಿದ್ದ ಶಿವಪ್ರಸಾದ್‌ ಅವರು ಯಾವುದೇ ಸೂಚನೆಯನ್ನು ನೀಡದೆ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ನ್ಯಾಯಾಧೀಶರು ನೋಟಿಸ್‌ ಜಾರಿ ಮಾಡಿದ್ದಾರೆ.

ನೋಂದಾಯಿತ ಅಂಚೆಯ ಹಾಗೂ ನ್ಯಾಯಾಲಯದ ಮೂಲಕ ಸೂಚನಾ ಪತ್ರಗಳನ್ನು ಹಾಲಿ ವಿಳಾಸಕ್ಕೆ ಹಾಗೂ ಸೇವಾ ಪುಸ್ತಕದಲ್ಲಿ ನಮೂದಿಸಿದ ಖಾಯಂ ವಿಳಾಸಕ್ಕೆ ಕಳುಹಿಸಲಾಗಿದ್ದರೂ ಪತ್ರಗಳು ಜಾರಿಯಾಗದೆ ವಾಪಸ್‌ ಬಂದಿರುತ್ತವೆ. ಸರಕಾರಿ ನೌಕರರಾಗಿ ಯಾವುದೇ ಸೂಚನೆ ಅಥವಾ ಪೂರ್ವಾನುಮತಿಯನ್ನು ಪಡೆಯದೆ ಕಚೇರಿ ಕೆಲಸಕ್ಕೆ ಅನಧಿಕೃತವಾಗಿ ಗೈರು ಹಾಜರಾಗಿರುತ್ತಾರೆ. ಇದು ಅವರಿಗೆ ಕರ್ತವ್ಯ ನಿಷ್ಠೆ ಇಲ್ಲದಿರುವುದನ್ನು ತೋರಿಸುವ ಕಾರಣ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮ, 1957ರಂತೆ ನಿಮ್ಮ ಮೇಲೆ ಶಿಸ್ತಿನ ಕ್ರಮ ಏಕೆ ಕೈಗೊಳ್ಳಬಾರದು ಎಂದು ನೋಟಿಸ್‌ ಜಾರಿಗೊಳಿಸಲಾಗಿದೆ. ಪ್ರತಿಕ್ರಿಯೆ ಏನಾದರೂ ಇದ್ದಲ್ಲಿ ಪ್ರಕಟನೆಯ 7 ದಿನದ ಒಳಗೆ ಸಲ್ಲಿಸತಕ್ಕದ್ದು. ತಪ್ಪಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ನ್ಯಾಯಾಧೀಶರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com